ಉದ್ಯಮಿಗೆ ಹಣದ ಬೇಡಿಕೆ ಇಟ್ಟು, ಹಣ ವಸೂಲಿ ಮಾಡಿದ ಇಬ್ಬರು ರೌಡಿ ಶೀಟರ್ ಗಳ ಬಂಧನ

Spread the love

ಉದ್ಯಮಿಗೆ ಹಣದ ಬೇಡಿಕೆ ಇಟ್ಟು  ಹಣ ವಸೂಲಿ ಮಾಡಿದ ಇಬ್ಬರು ರೌಡಿ ಶೀಟರ್ ಗಳ ಬಂಧನ

ಪುತ್ತೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಉದ್ಯಮಿಗೆ ಹಣದ ಬೇಡಿಕೆ ಇಟ್ಟು, ಬೆದರಿಕೆ ಕರೆ ಮಾಡಿ, ಹಣ ವಸೂಲಿ ಮಾಡಿದ ಇಬ್ಬರು ರೌಡಿ ಶೀಟರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಂಟ್ವಾಳ ಗೋಳ್ತಮಜಲು ನಿವಾಸಿ ಕಲಂದರ್‌ ಶರೀಫ್‌ ಶಾಫಿ ಮತ್ತು ಮಂಜನಾಡಿ ನಿವಾಸಿ ಹಸನಬ್ಬ@ಹಸನ್@ಅಚ್ಚು ಅಚುನ್ ಎಂದು ಗುರುತಿಸಲಾಗಿದೆ,

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಉದ್ಯಮಿಯೊಬ್ಬರಿಗೆ ಅಪರಿಚಿತ ವ್ಯಕ್ತಿಯು ವಿವಿದ ಮೊಬೈಲ್ ಗಳಿಂದ ಕರೆ ಮಾಡಿ ಯಾರೋ ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾನೆ, ಅವನನ್ನು ಬಿಡಿಸಲು ಹಣ ಬೇಕು, ಅವನನ್ನು ಬಿಡಿಸಲು 13,00,000/- ತಗಲುತ್ತದೆ. ಅವನನ್ನು ಬಿಡಿಸಲು ನೀನು ಹಣ ಕೊಡಬೇಕು, ನೀನು 2 ದಿನದ ಒಳಗೆ 3,50,000/- ಹಣ ರೆಡಿ ಮಾಡಬೇಕು, ಇಲ್ಲದಿದ್ದರೆ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ. ನಿನ್ನ ಮಕ್ಕಳ ಜೀವನ ಹಾಳು ಮಾಡುತ್ತೇನೆ. ಈ ವಿಚಾರವನ್ನು ಇತರರಲ್ಲಿ ತಿಳಿಸಿದರೆ ನಿನ್ನ ಹೆಣ ಖಂಡಿತ ಬೀಳುತ್ತದೆ, ನೀನು ಜೀವಂತ ಬದುಕಲು ಸಾಧ್ಯವಿಲ್ಲ’ ಎಂದು ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ: 03/2022 ಕಲಂ: 504,506,507,387 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ಕೈಗೊಂಡ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ದಿನಾಂಕ: 14-01-2022ರಂದು ಉದ್ಯಮಿಯಿಂದ ಹಣ ಪಡೆದುಕೊಂಡು ಹೋಗುವ ಸಮಯ ಕ್ಷೀಪ್ರ ಕಾರ್ಯಚರಣೆ ನಡೆಸಿ, ಆರೋಪಿಗಳನ್ನು ಬಂಧೀಸಿದ್ದಾರೆ.

ಉದ್ಯಮಿಯಿಂದ ವಸೂಲಿ ಮಾಡಿದ ರೂ 50,000/- ಹಣ ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರ ಪೈಕಿ ಕಲಂದರ್ ಶರೀಫ್ ಶಾಫಿ ಈತನು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್‌ ಆಗಿದ್ದು, ಹಸನಬ್ಬ ಹಸನ್ ಅಚ್ಚು ಅಚುನ್ ಈತನು ಮಂಗಳೂರು ನಗರದ ಕೋಣಾಜೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಅಲ್ಲದೆ ಕಂಕನಾಡಿ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನಾವಾಣೆ ಮತ್ತು ಪುತ್ತೂರು ಉಪ ವಿಭಾಗ ಪೊಲೀಸ್ ಉಪಾಧೀಕ್ಷಕರಾದ ಡಾ| ಗಾನ ಪಿ ಕುಮಾರ್ ರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಗೆ ರವರ ನೇತೃತ್ವದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರುಗಳಾದ ಉದಯರವಿ ಎಂ.ವೆ, ಅಮೀನ್ ಸಾಬ್ ಎಂ ಅತ್ತಾರ್, ಹಾಗೂ ಸಿಬ್ಬಂದಿಗಳಾದ ಕೃಷ್ಣಪ್ಪ, ದೇವರಾಜ್, ಅದ್ರಾಮ, ಪ್ರವೀಣ್ ರ, ಹರ್ಷಿತ್, ಗಾಯತ್ರಿ, ವಿನೋದ್, ರವರು ಭಾಗವಹಿಸಿರುತ್ತಾರೆ. ಜಿಲ್ಲಾ ಗಣಕಯಂತ್ರ ವಿಭಾಗದ ಸಂಪತ್, ದಿವಾಕರ್ ರವರು ಸಹಕರಿಸಿರುತ್ತಾರೆ.


Spread the love

Leave a Reply