ಉದ್ಯಮಿ ಬಿ.ಎಂ.ಶರೀಫ್ ಅವರಿಗೆ ರೆಡ್ ಕ್ರಾಸ್  ಸದಸ್ಯತ್ವ

Spread the love

ಉದ್ಯಮಿ ಬಿ.ಎಂ.ಶರೀಫ್ ಅವರಿಗೆ ರೆಡ್ ಕ್ರಾಸ್  ಸದಸ್ಯತ್ವ

ಮಂಗಳೂರು: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದ.ಕ.ಜಿಲ್ಲಾ ಸಮಿತಿಗೆ ಪೋಷಕ ಸದಸ್ಯರಾಗಿ ಸೇರ್ಪಡೆಗೊಂಡ ಸೌದಿ ಅರೇಬಿಯಾ ಉದ್ಯಮಿ ಬಿ.ಎಂ.ಶರೀಫ್ ಅವರಿಗೆ ಸದಸ್ಯತ್ವ ಫಲಕವನ್ನು ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರೂ ಆದ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹಸ್ತಾಂತರಿಸಿದರು.

ರೆಡ್ ಕ್ರಾಸ್ ನ ಸಮಾಜಮುಖಿ ಕೆಲಸವನ್ನು‌ ನೋಡಿದ ಬಿ.ಎಂ.ಶರೀಫ್ ತನ್ನ ಜೊತೆಗೆ ಕುಟುಂಬದ ಎಲ್ಲಾ ಸದಸ್ಯರನ್ನು ರೆಡ್ ಕ್ರಾಸ್ ಸದಸ್ಯರನ್ನಾಗಿ ಸೇರ್ಪಡೆಗೊಳಿಸಿದ್ರು.

ಈ ಸಂದರ್ಭ ಬಿ.ಎಮ.ಶರೀಫ್ ಅವರ ಮಗಳು ಸಲ್ಮಾ ಶಮಾ, ರೆಡ್ ಕ್ರಾಸ್ ನ ಗೌರವ ಕಾರ್ಯದರ್ಶಿ ಎಸ್.ಎ.ಪ್ರಭಾಕರ ಶರ್ಮಾ,ಜಿಲ್ಲಾ ಸಮಿತಿ ಸದಸ್ಯ ರವೀಂದ್ರನಾಥ್,ಜಿಲ್ಲಾ ಸಂಯೋಜಕ ಪ್ರವೀಣ್ ಕುಮಾರ್,ಪತ್ರಕರ್ತ ಸುಖ್ ಪಾಲ್ ಪೊಳಲಿ,ಅಲ್ ಅಮೀನ್ ಬ್ಲೆಡ್ ಡೋನರ್ ಸಂಸ್ಥೆಯ ಮಹಮ್ಮದ್ ಹರ್ಷದ್,ಉದ್ಯಮಿ ಅಲ್ತಾಫ್ ಉಪಸ್ಥಿತರಿದ್ದರು


Spread the love