ಉದ್ಯಾವರ: ಟ್ರಕ್ – ಬೈಕ್ ಅಫಘಾತದಲ್ಲಿ ಸವಾರ ಸ್ಥಳದಲ್ಲೇ ಸಾವು

Spread the love

ಉದ್ಯಾವರ: ಟ್ರಕ್ – ಬೈಕ್ ಅಫಘಾತದಲ್ಲಿ ಸವಾರ ಸ್ಥಳದಲ್ಲೇ ಸಾವು

ಉಡುಪಿ: ಲಾರಿ ಚಾಸಿ ಮತ್ತು ಬೈಕ್ ನಡುವೆ ನಡೆದ ಭೀಕರ ಅಫಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಉದ್ಯಾವರ ಸೇತುವೆ ಬಳಿ ಸೋಮವಾರ ಸಂಜೆ ನಡೆದಿದೆ.

ಮೃತ ವ್ಯಕ್ತಿಯನ್ನು ಕಟಪಾಡಿಯ ಮೂಡಬೆಟ್ಟು ನಿವಾಸಿ ಮಹಮ್ಮದ್ ರಫೀಕ್ ಬಾವಾ ಎಂದು ಗುರುತಿಸಲಾಗಿದೆ.

ಮೃತ ರಫೀಕ್ ಅವರು ಸೋಮವಾರ ಕಟಪಾಡಿ ಕಡೆಯಿಂದ ಉಡುಪಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love