ಉದ್ಯಾವರ ಸೇತುವೆಯಲ್ಲಿ ಹಿಟ್ ಎಂಡ್ ರನ್‍ ! ಸ್ಕೂಟಿಗೆ ಟ್ಯಾಂಕರ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

Spread the love

ಉದ್ಯಾವರ ಸೇತುವೆಯಲ್ಲಿ ಹಿಟ್ ಎಂಡ್ ರನ್‍ ! ಸ್ಕೂಟಿಗೆ ಟ್ಯಾಂಕರ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಉದ್ಯಾವರ ಸೇತುವೆಯಲ್ಲಿ ಸ್ಕೂಟಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ಬುಧವಾರ ಸಂಜೆ ನಡೆದಿದೆ.

ಮೃತ ವ್ಯಕ್ತಿಯನ್ನು ಮಲ್ಲಾರು ನಿವಾಸಿ ಅಲ್ಫಾಝ್ ಎಂದು ಗುರುತಿಸಲಾಗಿದೆ.

ಪೋಲಿಸ್ ಮೂಲಗಳ ಪ್ರಕಾರ ಅಲ್ಫಾಝ್ ಅವರು ಕಾಪುವಿನಿಂದ ಉಡುಪಿ ಕಡೆಗೆ ತಮ್ಮ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಉದ್ಯಾವರ ಸೇತುವೆಯಲ್ಲಿ ಟ್ಯಾಕರೊಂದು ಸ್ಕೂಟಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಫಘಾತದ ರಭಸಕ್ಕೆ ಸ್ಕೂಟಿ ಸವಾರ ಹೆದ್ದಾರಿಗೆ ಬಿದ್ದ ವೇಳೆ ಟ್ಯಾಂಕರ್ ಚಕ್ರ ಅಲ್ಫಾಝ್ ತಲೆಯ ಮೇಲೆ ಹರಿದಿದ್ದು ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರೀಶಿಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love