ಉದ್ಯೋಗ ಕ್ಷೇತ್ರದ ಸವಾಲುಗಳ ಕುರಿತು ಸಂವಾದ ಕಾರ್ಯಕ್ರಮ

Spread the love

ಉದ್ಯೋಗ ಕ್ಷೇತ್ರದ ಸವಾಲುಗಳ ಕುರಿತು ಸಂವಾದ ಕಾರ್ಯಕ್ರಮ

ಮೂಡುಬಿದಿರೆ: ಆಳ್ವಾಸ್ ಸ್ನಾತ್ತಕೋತ್ತರ ಪತ್ರಿಕೋದ್ಯಮ ವಿಭಾಗದ ವತಿಯಿಂದ ಹಿರಿಯ ವಿದ್ಯಾರ್ಥಿನಿ, ಬೈಜುಸ್ ನಲ್ಲಿ ಬ್ಯುಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ ಆಗಿರುವ ದೀಪಾ ಕಮಿಲ ಅವರ ಜೊತೆ ಸಂವಾದ ಕಾರ್ಯಕ್ರಮ ಅಯೋಜಿಸಲಾಯಿತು.

ಉದ್ಯೋಗ ಕ್ಷೇತ್ರದ ಸವಾಲುಗಳ ಕುರಿತು ಮಾತನಾಡಿದ ಅವರು, ಯಾವುದೇ ವೃತ್ತಿಗೆ ಭದ್ದರಾಗಿವುದು ಮುಖ್ಯ. ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ಉದ್ಯೋಗಕ್ಕೆ ಮೀಸಲಿಡುವುದು ಪ್ರಸ್ತುತ ವೃತ್ತಿ ಬದುಕಿನಲ್ಲಿ ಅಗತ್ಯ ಎಂದರು. ವಿದ್ಯಾರ್ಥಿಗಳಿಗೆ ಔದ್ಯೋಗಿಕ ಕ್ಷೇತ್ರದ ಸವಾಲುಗಳು ಹಾಗೂ ಅಗತ್ಯವಿರುವ ಕೌಶಲ್ಯಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿಭಾಗ ಸಂಯೋಜಕ ಪ್ರಸಾದ್ ಶೆಟ್ಟಿ, ಉಪನ್ಯಾಸಕರಾದ ಸಫಿಯಾ,ರವಿ ಮೂಡುಕೊಣಾಜೆ, ನಿಶಾನ್ ಹಾಗೂ ಅಕ್ಷಯ್, ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love