ಉದ್ಯೋಗ ಸಿಗದೆ ಯುವಕರು ತಪ್ಪು ದಾರಿಗೆ- ಮೊಹಮ್ಮದ್ ನಲಪಾಡ್

Spread the love

ಉದ್ಯೋಗ ಸಿಗದೆ ಯುವಕರು ತಪ್ಪು ದಾರಿಗೆ- ಮೊಹಮ್ಮದ್ ನಲಪಾಡ್

ಮೈಸೂರು: ಪದವಿ ಪಡೆದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ ಅವರು ಅಪರಾಧ ಚಟುವಟಿಕೆಗಳಂತಹ ತಪ್ಪು ದಾರಿ ಹಿಡಿಯುತ್ತಿದ್ದಾರೆ. ಉದ್ಯೋಗ ಕೊಡದಿರುವ ಬಿಜೆಪಿ ಸರ್ಕಾರವೇ ಇದಕ್ಕೆಲ್ಲ ಹೊಣೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಆರೋಪಿಸಿದರು.

ಶಿವಮೊಗ್ಗದಲ್ಲಿ ಉಗ್ರ ಸಂಘಟನೆ ಐಸಿಸ್ ಸಂಪರ್ಕದಲ್ಲಿದ್ದ ಯುವಕರ ಬಂಧನ ವಿಚಾರವಾಗಿ ಬುಧವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಯುವಕರು ತಪ್ಪಾದ ದಾರಿ ಹಿಡಿಯುತ್ತಿರುವುದು ಸತ್ಯ. ಇದಕ್ಕೆ ನಿರುದ್ಯೋಗ ಕಾರಣ. ಕೆಲಸವಿದ್ದರೆ ತಪ್ಪು ದಾರಿ ತುಳಿಯುವ ಯೋಚನೆ ಬರುವುದಿಲ್ಲ ಎಂದರು. ಯುವ ಜನರು ೨೦೨೩ರವರೆಗೆ ತಾಳ್ಮೆಯಿಂದ ಇರಬೇಕು. ಸುವರ್ಣ ಕಾಲ ಬರುತ್ತದೆ. ತಪ್ಪು ದಾರಿಗೆ ಹೋಗಬೇಡಿ ಎಂದು ಕೋರಿದರು.

ಐಸಿಸಿ ಸಂಪರ್ಕದಲ್ಲಿರುವವರನ್ನು ದೇಶದಲ್ಲಿ ಇಟ್ಟುಕೊಳ್ಳಬೇಡಿ. ಅವರಿಗೆ ಗಲ್ಲು ಶಿಕ್ಷೆ ವಿಧಿಸಿ ಎಂದರು. ಬೆಂಗಳೂರಿನಲ್ಲಿ ಒತ್ತುವರಿ ತೆರವಿಗೆ ಕಾಂಗ್ರೆಸ್ ವಿರೋಧವಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ಗೂ ಒತ್ತುವರಿ ತೆರವಿಗೂ ಸಂಬಂಧವಿಲ್ಲ. ಬಿಜೆಪಿ ಕಾನೂನು ಪ್ರಕಾರ ಕ್ರಮ ವಹಿಸಲಿ. ತೆರವಿಗೆ ಮುನ್ನ ವೈಜ್ಞಾನಿಕವಾಗಿ ವರದಿ ತಯಾರಿಸಲಿ. ನೀರು ಸಂಗ್ರಹವಾಯಿತೆಂದು ಸಿಕ್ಕ ಸಿಕ್ಕವರ ಮನೆ, ಕಟ್ಟಡ ತೆರವುಗೊಳಿಸಿದರೆ ಹೇಗೆ ಎಂದು ಕೇಳಿದರು.


Spread the love

Leave a Reply

Please enter your comment!
Please enter your name here