ಉಪ್ಪಿನಂಗಡಿ; ಬೈಕ್ ನಲ್ಲಿ ಬಂದ ತಂಡದಿಂದ ಚೂರಿ ಇರಿತ: ಮೂವರಿಗೆ ಗಾಯ

Spread the love

ಉಪ್ಪಿನಂಗಡಿ; ಬೈಕ್ ನಲ್ಲಿ ಬಂದ ತಂಡದಿಂದ ಚೂರಿ ಇರಿತ: ಮೂವರಿಗೆ ಗಾಯ

ಉಪ್ಪಿನಂಗಡಿ: ಹಸಿಮೀನು ಮಾರಾಟದ ಅಂಗಡಿಯೊಂದರ ಬಳಿ ನಿಂತಿದ್ದವರಿಗೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ಬಳಿಯ ಹಳೆ ಗೇಟು ಎಂಬಲ್ಲಿ ಸೋಮವಾರ ರಾತ್ರಿ ನಡೆದಿರುವುದು ವರದಿಯಾಗಿದೆ.

ಘಟನೆಯಿಂದ ಮೀನಿನ ಅಂಗಡಿ ಮಾಲಕ ಅಶೋಕ ಶೆಟ್ಟಿ, ಅವರ ಸಹೋದರ ಮೋಹನ್ ಶೆಟ್ಟಿ ಹಾಗೂ ಗ್ರಾಹಕ ಮಹೇಶ ಎಂಬವರು ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ರಾತ್ರಿ 8 ಗಂಟೆಯ ಸುಮಾರಿಗೆ ಹಸಿಮೀನು ಮಾರಾಟದ ಅಂಗಡಿ ಬಳಿ ಏಳೆಂಟು ಮಂದಿ ನಿಂತಿದ್ದರು. ಈ ವೇಳೆ ಕಾರು ಮತ್ತು ಬೈಕ್‌ಗಳಲ್ಲಿ ಬಂದ ಮುಸುಕುಧಾರಿಗಳು ಅಲ್ಲಿದ್ದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರೆನ್ನಲಾಗಿದೆ ಉಳಿದವರೆಲ್ಲ ಓಡಿ ಪರಾರಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ.

ಉಪ್ಪಿನಂಗಡಿ ಪೊಲೀಸ್‌ ಠಾಣೇಯಲ್ಲಿ ಪ್ರಕರಣ ದಾಖಲಾಗಿದೆ.


Spread the love