ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿಗೆ ಅಕ್ರಮ ಪ್ರವೇಶ – ಮೂವರ ಪತ್ರಕರ್ತರ ವಿರುದ್ದ ಪ್ರಕರಣ ದಾಖಲು

Spread the love

ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿಗೆ ಅಕ್ರಮ ಪ್ರವೇಶ – ಮೂವರ ಪತ್ರಕರ್ತರ ವಿರುದ್ದ ಪ್ರಕರಣ ದಾಖಲು

ಉಪ್ಪಿನಂಗಡಿ:ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿನ ಹಿಜಾಬ್- ಕೇಸರಿ ವಿವಾದ ವಿಚಾರವಾಗಿ ಇದೀಗ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿ ಶಾಲು ಎಳೆದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪತ್ರಕರ್ತರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ವರದಿಗಾರರಾದ ಅಜಿತ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ಸಿದ್ದೀಕ್ ನೀರಾಜೆ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಜೂನ್ 2ರಂದು 9.30 ರ ಸುಮಾರಿಗೆ ಅಜಿತ್ ಕುಮಾರ್ ಎಂಬಾತ ವಿದ್ಯಾರ್ಥಿನಿಯ ಶಾಲನ್ನು ಎಳೆಯಲು ಪ್ರಯತ್ನಿಸಿದ್ದು ಆಕೆ ತಪ್ಪಿಸಿಕೊಂಡಾಗ ಪ್ರವೀಣ್ ಕುಮಾರ್ ಎಂಬಾತ ಪ್ರಚೋದನೆ ನೀಡಿದ್ದಾನೆ. ಈ ವೇಳೆ ಅಜಿತ್ ಕುಮಾರ್ ವಿದ್ಯಾರ್ಥಿನಿಯ ವಿಡಿಯೋ ಮಾಡಿದ್ದು ಇದನ್ನು ಪ್ರಶ್ನಿಸಿದಾಗ ‘ನಾಳೆಯಿಂದ ಹೇಗೆ ಕಾಲೇಜಿಗೆ ಬರುತ್ತೇವೆ ಎಂದು ನೋಡುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ವಿದ್ಯಾರ್ಥಿನಿ ಪ್ರಾಂಶುಪಾಲರಿಗೆ ಈ ಬಗ್ಗೆ ಮೌಖಿಕ ದೂರು ನೀಡಿದ್ದು ಪ್ರಾಂಶುಪಾಲರು ಮೂವರನ್ನು ಕರೆದು ಅವರು ತೆಗೆದ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ.ಬಳಿಕ ಅವರೆಲ್ಲರೂ ಪತ್ರಕರ್ತರು ಎಂಬುದು ತಿಳಿಯಿತು ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾಳೆ.

ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


Spread the love