ಉಪ್ಪುಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನ

Spread the love

ಉಪ್ಪುಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನ

ಕುಂದಾಪುರ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪುಂದ ಇದರ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ನಡೆಯಿತು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉದಯ್ ಪಡಿಯಾರ್ ಧ್ವಜಾರೋಹಣ ಮಾಡಿ ಸಂದೇಶ ನೀಡಿದರು.

ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರ ದಿ|ಗೋವಿಂದ ಖಾರ್ವಿ ಸಂಕದ ಬಾಗಿಲು ಮನೆ ಇವರು ಹುಟ್ಟಿದ ಮನೆಯಾದ ಅಮ್ಮನವರ ತೊಪ್ಲುಗೆ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು.

ಮೆರವಣಿಗೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿವಾಕರ ಶೆಟ್ಟಿಯವರು ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ/ ಶಿಕ್ಷಕಿಯವರು ಹಾಗೂ ಎಸ್ ಡಿ ಎಮ್ ಸಿ ಸದಸ್ಯರು ,ಸಾರ್ವಜನಿಕ ರು ಭಾಗವಹಿಸಿದರು .

ಶಾಲಾ ಮುಖ್ಯೋಪಾಧ್ಯಾಯ ವೆಂಕ ಉಪ್ಪಾರ್ ಎಲ್ಲರನ್ನೂ ಸ್ವಾಗತಿಸಿ, ಮೆರವಣಿಗೆ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು

ದಿವಂಗತ ಗೋವಿಂದ ಖಾರ್ವಿಯವರ ಕುಟುಂಬದ ವರು ಶಾಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ ಮಾಡಿದರು.

ಸ್ವಾತಂತ್ರ್ಯ ಹೋರಾಟಗಾರ ಗೋವಿಂದ ಖಾರ್ವಿ ಯವರ ಭಾವಚಿತ್ರ ವನ್ನು ಪುಷ್ಪ ನಮನದ ನಂತರ ಮೆರವಣಿಗೆ ಮೂಲಕ ಶಾಲೆ ಗೆ ತರಲಾಯಿತು.

ಗೋವಿಂದ ಖಾರ್ವಿ ಯವರ ಕುಟುಂಬಸ್ಥರ ಸಹಕಾರ ಕ್ಕೆ ಶಾಲೆ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.


Spread the love