ಉಳ್ಳಾಲ: ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ: ಆತ್ಮಹತ್ಯೆ ಶಂಕೆ
ಉಳ್ಳಾಲ: ಬೀರಿ ಸಮೀಪದ ನಿವಾಸಿ ನಾಪತ್ತೆಯಾಗಿದ್ದ ತೇಜಸ್ (24) ಅವರ ಮೃತ ದೇಹ ಉಚ್ಚಿಲ ಸಂಕೋಲಿಗೆ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದ್ದು, ಯುವಕ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.
ಬೀರಿಯ ಮೋಹನ್ ದಾಸ್ ಎಸ್ ರವರ ಪುತ್ರ ತೇಜಸ್ ಬುಧವಾರ ರಾತ್ರಿ ಕೋಣೆಯಲ್ಲಿ ಮಲಗಿದವರು ನಾಪತ್ತೆ ಆಗಿದ್ದರು. ಗುರುವಾರ ಮುಂಜಾನೆ ತೇಜಸ್ ನಾಪತ್ತೆ ಆಗಿರುವುದು ಬೆಳಕಿಗೆ ಬಂದಿತು. ಈ ಬಗ್ಗೆ ಮೋಹನ್ ದಾಸ್ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.
ಪೊಲೀಸರು ಪರಿಶೀಲನೆ ನಡೇಸಿದಾಗ ಉಚ್ಚಿಲ ರೈಲ್ವೇ ಹಳಿ ಬಳಿ ಮೃತದೇಹ ಪತ್ತೆ ಆಗಿದೆ. ಘಟನಾ ಸ್ಥಳದಲ್ಲಿ ತೇಜಸ್ ನ ಶೂ ಪತ್ತೆಯಾಗಿದೆ. ಈ ಬಗ್ಗೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.