ಉಳ್ಳಾಲ: ನಿಷೇಧಿತ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

Spread the love

ಉಳ್ಳಾಲ: ನಿಷೇಧಿತ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

ಉಳ್ಳಾಲ: ನಿಷೇಧಿತ ಎಂಡಿಎಂಎ ಸಾಗಾಟ ನಡೆಸುತ್ತಿದ್ದ ಇಬ್ಬರನ್ನು ಉಳ್ಳಾಲ ಪೊಲೀಸರು ಉಚ್ಚಿಲ ರಿಲಾಯನ್ಸ್ ಪೆಟ್ರೋಲ್ ಪಂಪ್ ನಲ್ಲಿ ಅಡ್ಡಗಟ್ಟಿ ಬಂಧಿಸಿದ್ದಾರೆ. ಬಂಧಿತರಿಂದ 95,000 ರೂ. ಬೆಲೆಯ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಳ್ಳಾಲದ ಆಝಾದ್ ನಗರ ಒಂದನೇ ಕ್ರಾಸ್ ನ ಮೊಹಮ್ಮದ್ ಖಾಲಿದ್ (39), ಹಾಗೂ ಮಂಜೇಶ್ವರದ ಲಿಖಿತ್ (21) ಬಂಧಿತರು. ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಇವರನ್ನು ಸೋಮೇಶ್ವರ ಗ್ರಾಮದ ಉಚ್ಚಿಲ ರಿಲಾಯನ್ಸ್ ಪೆಟ್ರೋಲ್ ಪಂಪ್ ಬಳಿ ಬಂಧಿಸಿದ್ದಾರೆ.

ಇಬ್ಬರು ಯುವಕರು ಡಿಯೊ ಸ್ಕೂಟರ್ ನಲ್ಲಿ ತಲಪಾಡಿಯಿಂದ ಉಚ್ಚಿಲ ರಿಲಯನ್ಸ್ ಪೆಟ್ರೋಲ್ ಪಂಪ್ ಕಡೆಗೆ ಎಂಡಿಎಂಎ ಹೊಂದಿರುವ ಪ್ಯಾಕೆಟ್ ಸಹಿತ ಸಟರನಲ್ಲಿ ಹೊಗುತ್ತಿದ್ದ ಸಮಯದಲ್ಲಿ ಉಳ್ಳಾಲ ಪೊಲೀಸರು ಸ್ಕೂಟರನ್ನು ಅಡ್ಡಗಟ್ಟಿ ಬಂಧಿಸಿದ್ದಾರೆ. ಇವರಿಂದ ರೂ.20,000 ಮೌಲ್ಯದ 10 ಗ್ರಾಂ ರೂ. 50,000 ಬೆಲೆಬಾಳುವ ಸ್ಕೂಟರ್ ಹಾಗೂ ರೂ. 25,000 ಬೆಲೆಬಾಳುವ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಗಾಂಜಾ ಮಾರಾಟದ ಪ್ರಕರಣಗಳಿವೆ.

ಉಳ್ಳಾಲ ಠಾಣೆಯ ಇನ್ಸ್ಪೆಕ್ಟರ್ ಸಂದೀಪ್ ರವರ ಮಾರ್ಗದರ್ಶನದಲ್ಲಿ ಪಿಎಸ್ ಐಗಳಾದ ರೇವಣ್ ಸಿದ್ದಪ್ಪ, ಪ್ರದೀಪ್ ಟಿ.ಆರ್, ಶಿವಕುಮಾರ್ ಹಾಗು ಸಿಬ್ಬಂದಿಗಳಾದ ರಂಜಿತ್, ಅಶೋಕ, ಅಕ್ಬರ್, ಸಾಗರ, ವಾಸುದೇವ, ಸತೀಶ್, ಚಿದಾನಂದ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Please enter your comment!
Please enter your name here