ಉಳ್ಳಾಲ: ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ

Spread the love

ಉಳ್ಳಾಲ: ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ

ಉಳ್ಳಾಲ: ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಪಿಲಾರು ಎಂಬಲ್ಲಿ ಗುರುವಾರ ಮಧ್ಯಾಹ್ನದ ವೇಳೆ ಬೆಳಕಿಗೆ ಬಂದಿದೆ.

 

ಪಿಲಾರು ನಿವಾಸಿ ಶಿವಾನಂದ ಪೂಜಾರಿ (55) ಮೃತದೇಹ ತೋಟದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ ಪತ್ನಿ ಶೋಭಾ ಪೂಜಾರಿ(45) ಮೃತದೇಹ ಮನೆಯ ಕೋಣೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅನುಮಾನ ಸ್ವಭಾವದ ಶಿವಾನಂದ ತನ್ನ ಹೆಂಡತಿ ಶೋಭಾಳೊಂದಿಗೆ  ಯಾವಾಗಲೂ ಸಣ್ಣ ಪುಟ್ಟ ವಿಷಯಕ್ಕೂ ಜಗಳವಾಡುತ್ತಿದ್ದು ಈತ ಆಕೆಯನ್ನು ಅನೈತಿಕ ಸಂಬಂದ ಇದೆ ಎಂದು ಸಂಶಯಮಾಡಿ ಕಂಡಕಂಡವರಿಗೆ ಕಟ್ಟುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಗುರುವಾರ ಕೂಡ ಶೋಭಾಳೊಂದಿಗೆ ಮುಂಜಾನೆ ಜಗಳವಾಡುತ್ತಿದ್ದರು ಎಂಬುದಾಗಿ ಮಗ ಕಾರ್ತಿಕ್ ತಿಳಿಸಿದ್ದು, ಮಗ ಕೆಲಸಕ್ಕೆ ತೆರಳಿದಾಗ ಘಟನೆ ನಡೆದಿದೆ.

ಮೃತರಿಗೆ ಒಬ್ಬ ಮಗ ಹಾಗೂ ಮಗಳಿದ್ದು,  ಮಗ ತಂದೆ-ತಾಯಿಗಳೊಂದಿಗೆ  ವಾಸವಿದ್ದು, ಮಗಳನ್ನು ಪೆರ್ಮುದೆಯ ಸಂದೀಪ್ ರವರೊಂದಿಗೆ ವಿವಾಹ ಮಾಡಿಕೊಟ್ಟಿದ್ದರು

ಘಟನಾ ಸ್ಥಳಕ್ಕೆ ಫಾರೆನ್ಸಿಕ್‌ ತಂಡ ಭೇಟಿ ನೀಡಿ ಎರಡು ಮೃತದೇಹಗಳನ್ನು ಪರಿಶೀಲಿಸುತ್ತಿದ್ದಾರೆ. ಎಸಿಪಿ ದಿನಕರ್‌ ಶೆಟ್ಟಿ ನೇತೃತ್ವದಲ್ಲಿ ಉಳ್ಳಾಲ ಪೊಲೀಸ್‌ ಠಾಣೆಯ ತಂಡ ತನಿಖೆ ಕೈಗೆತ್ತಿಕೊಂಡಿದೆ.

https://www.facebook.com/MangaloreanNews/videos/1104940700394981


Spread the love