
Spread the love
ಉಳ್ಳಾಲ: ಮಾವಿನ ಹಣ್ಣು ಕೀಳಲು ಮರ ಹತ್ತಿದ ಯುವಕ ವಿದ್ಯುತ್ ತಂತಿ ತಗುಲಿ ಸಾವು
ಉಳ್ಳಾಲ: ಮಾವಿನಕಾಯಿ ಕೀಳಲು ಮರಹತ್ತಿದ ಯುವಕನೋರ್ವ ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜಲಾಲ್ ಬಾಗ್ ನಲ್ಲಿ ಶುಕ್ರವಾರ ಸಂಜೆ ವೇಳೆ ಸಂಭವಿಸಿದೆ.
ಮಹಮ್ಮದ್ ಇಲಿಯಾಸ್ (21) ಮೃತ ದುರ್ದೈವಿ.
ಸಂಜೆ ವೇಳೆ ಮನೆ ಸಮೀಪದ ಕಂಪೌಂಡಿನಲ್ಲಿರುವ ಮಾವಿನಮರಕ್ಕೆ ಹಣ್ಣು ಕೀಳಲೆಂದು ತೆರಳಿದ ಸಂದರ್ಭ ಘಟನೆ ನಡೆದಿದೆ.
Spread the love