ಉಳ್ಳಾಲ ಸೋಮೇಶ್ವರ ಬೀಚ್ ನಲ್ಲಿ ತಂಡದಿಂದ ಅನೈತಿಕ ಪೊಲೀಸ್ ಗಿರಿ ಆರೋಪ

Spread the love

ಉಳ್ಳಾಲ ಸೋಮೇಶ್ವರ ಬೀಚ್ ನಲ್ಲಿ ತಂಡದಿಂದ ಅನೈತಿಕ ಪೊಲೀಸ್ ಗಿರಿ ಆರೋಪ

ಮಂಗಳೂರು: ವಿಹಾರಕ್ಕೆಂದು ಬಂದ ಖಾಸಗಿ ವಿದ್ಯಾಸಂಸ್ಥೆಗೆ ಸೇರಿದ ವಿದ್ಯಾರ್ಥಿಗಳ ಮೇಲೆ ತಂಡವೊಂದು ದಾಳಿ ನಡೆಸಿ ಅನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಸಮುದ್ರ ತೀರದಲ್ಲಿ ಗುರುವಾರ ಸಂಜೆ ನಡೆದಿದೆ.

ನಗರದ ಖಾಸಗಿ ವಿದ್ಯಾಸಂಸ್ಥೆಗೆ ಸೇರಿದ ಕೇರಳ ಮೂಲದ ಆರು ಮಂದಿ ವಿದ್ಯಾರ್ಥಿಗಳು ವಿಹಾರಕ್ಕೆಂದು ಸೋಮೇಶ್ವರ ಕಡಲ ತೀರಕ್ಕೆ ಆಗಮಸಿದ್ದರು ಎನ್ನಲಾಗಿದೆ ಮೂವರು ವಿದ್ಯಾರ್ಥಿನಿಯರ ಜೊತೆ ಇದ್ದ ಮೂವರು ವಿದ್ಯಾರ್ಥಿಗಳು ಅನ್ಯಕೋಮಿಗೆ ಸೇರಿದವರೆಂಬ ಸಂಶಯದ ಮೇಲೆ ತಂಡವೊಂದು ಇವರು ಹಿಂಬಾಲಿಸಿತ್ತು. ವಿದ್ಯಾರ್ಥಿಗಳು ಸಮುದ್ರ ತೀರದಲ್ಲಿ ವಿಹಾರ ನಡೆಸುತ್ತಿರುವ ಸಂದರ್ಭ ದಾಳಿ ನಡೆಸಿದ್ದು ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗಿದ್ದ ವಿದ್ಯಾರ್ಥಿನಿಯರು ಊರಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಉಳ್ಳಾಲ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.


Spread the love