ಉಳ್ಳಾಲ: ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿಗೆ ಸ್ಕೂಟರ್‌ಗಳ ಡಿಕ್ಕಿ, ಸವಾರ ಸಾವು

Spread the love

ಉಳ್ಳಾಲ: ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿಗೆ ಸ್ಕೂಟರ್‌ಗಳ ಡಿಕ್ಕಿ, ಸವಾರ ಸಾವು
 
ಉಳ್ಳಾಲ: ನೇತ್ರಾವತಿ ಸೇತುವೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಕೆಟ್ಟು ನಿಂತ ಲಾರಿಗೆ ಗುರುವಾರ ಮುಂಜಾನೆ ಎರಡು ಸ್ಕೂಟರ್‌ಗಳು ಡಿಕ್ಕಿ ಹೊಡೆದು ಒಂದು ಸ್ಕೂಟರಿನ ಸವಾರ ಮೃತಪಟ್ಟಿದ್ದಾರೆ.

ಆ ಸ್ಕೂಟರ್‌ನ ಸಹಸವಾರ ಹಾಗೂ ಇನ್ನೊಂದು ಸ್ಕೂಟರಿನ ಸವಾರ ಗಾಯಗೊಂಡಿದ್ದಾರೆ.

ಅಂಗರಗುಂಡಿ ನಿವಾಸಿ ಮೊಹಮ್ಮದ್ ನೌಫಾಲ್ (26) ಮೃತರು. ಸಹ ಸವಾರ ಉಮ್ಮರ್ ಫಾರೂಕ್ ಗಾಯಗೊಂಡಿದ್ದಾರೆ. ಇನ್ನೊಂದು ಸ್ಕೂಟರಿನಲ್ಲಿದ್ದ ಗಾಯಾಳುಗಳ ವಿವರ ತಿಳಿದುಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯ ತರಕಾರಿ ವ್ಯಾಪಾರ ನಡೆಸುತ್ತಿದ್ದ ಮೊಹಮ್ಮದ್‌ ನೌಫಲ್‌ ಮತ್ತು ಉಮ್ಮರ್ ಫಾರೂಕ್ ಈ ಸಲುವಾಗಿ ಪಂಪ್ವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ.

ನೇತ್ರಾವತಿ ಸೇತುವೆಯಲ್ಲಿ ಟಿಂಬರ್ ಲಾರಿ ಕೆಟ್ಟು ನಿಂತಿತ್ತು. ಅದರ ಹಿಂಭಾಗಕ್ಕೆ ಒಂದು ಸ್ಕೂಟರ್ ಡಿಕ್ಕಿ ಹೊಡೆದ ಕೆಲವೇ ನಿಮಿಷಗಳಲ್ಲಿ ಇನ್ನೊಂದು ಸ್ಕೂಟರ್ ಕೂಡ ಡಿಕ್ಕಿ ಹೊಡೆದಿದೆ.

ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love