ಎಂಆರ್ ಪಿಎಲ್ ನ H2S ಗ್ಯಾಸ್ ಉತ್ಪಾದನಾ ಘಟಕದಲ್ಲಿ ಗ್ಯಾಸ್ ಸೋರಿಕೆ; ಇಬ್ಬರು ಮೃತ್ಯು, ಓರ್ವ ಗಂಭೀರ
ಸುರತ್ಕಲ್: ಇಲ್ಲಿನ ಎಚ್ 2ಎಸ್ ಗ್ಯಾಸ್ ಉತ್ಪಾದನಾ ಘಟಕದಲ್ಲಿ ಗ್ಯಾಸ್ ಸೋರಿಕೆಯಾಗಿ ಇಬ್ಬರು ಮೃತಪಟ್ಟು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಸುರತ್ಕಲ್ ನ ಎಂಆರ್ ಪಿಎಲ್ ನಲ್ಲಿ ಶನಿವಾರ ಬೆಳಗ್ಗೆ ವರದಿಯಾಗಿದೆ.
ಎಂಆರ್ ಪಿಎಲ್ ನ OM&S ಘಟಕದ ಶೇಖರಣಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆಯಲ್ಲಿ ಕೇರಳ ಮೂಲದ ಓರ್ವ ಮತ್ತು ಉತ್ತರ ಪ್ರದೇಶ ಮೂಲದ ಓರ್ವ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮತ್ತೋರ್ವ ಉತ್ತರ ಪ್ರದೇಶ ಮೂಲದ ಕಾರ್ಮಿಕ ಗಂಭೀರವಾಗಿದ್ದು, ಅವರನ್ನು ನಗರದ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಮೂರೂ ಕಾರ್ಮಿಕರು ಎಂಆರ್ ಪಿಎಲ್ OM&S ಘಟಕದ ಶೇಖರಣಾ ಪ್ರದೇಶದ ನಿರ್ವಹಣೆ ಕಾರ್ಮಿಕಾರಗಿದ್ದರು ಎನ್ನಲಾಗಿದೆ.