
ಎಂಸಿಎಸ್ ಟ್ರೋಪಿ ಯಲ್ಲಿ ಪ್ರಥಮ ಬಹುಮಾನ ಗೆದ್ದ ಶಿವಶಕ್ತಿ ಬಾಯ್ಸ್ ಜಮಾಖಂಡಿ
ಮಂಗಳೂರು : ಮರಾಠ ಸ್ಫೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ರಿ. ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಮರಾಠ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯಮಟ್ಟದ ಹಾಗೂ ಕೇರಳದ ಮೂರು ಜಿಲ್ಲೆಗಳನ್ನೊಳ ಗೊಂಡು ಹಗಲು ರಾತ್ರಿ ಪುರುಷರ ಓವರ್ ಆರ್ಮ್ ಹಾಗೂ ಮಹಿಳೆಯರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ ಶಿವಶಕ್ತಿ ಬಾಯ್ಸ್ ಜಮಾಖಂಡಿಯ ತಂಡ ಪ್ರಥಮ ಬಹುಮಾನ ಹಾಗೂ ಮಹಿಳಾ ವಿಭಾಗದಲ್ಲಿ ಅಂಬಾಭವಾನಿ ಕ್ರಿಕೆಟರ್ಸ್ ಆದೂರು ತಂಡವು ಪ್ರಥಮ ಸ್ಥಾನ ಪಡೆಯಿತು.
ಒಟ್ಟು ಪುರುಷರ 21 ತಂಡಗಳು ಹಾಗೂ ಮಹಿಳೆಯರ 7 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದರು. ಈ ಪಂದ್ಯಾಟ ವನ್ನು ನಿವೃತ್ತ ಕರ್ನಲ್ ಶರತ್ ಭಂಡಾರಿ ರವರು ಉದ್ಘಾಟಿಸಿದರು. ಹಾಗೂ ವಿಜಯ ತಂಡಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಪ್ರಶಸ್ತಿಯನ್ನು ವಿತರಿಸಿ ಶಿವಾಜಿ ಮಹಾರಾಜರ ಬಗ್ಗೆ ಹಿತವಚನಗಳನ್ನು ಸಭೆಗೆ ವಿವರಿಸಿದರು.
ಪುರುಷರ ವಿಭಾಗದಲ್ಲಿ ಶಿವಶಕ್ತಿ ಬಾಯ್ಸ್ ಜಮಾಖಂಡಿಯ ತಂಡ ಪ್ರಥಮ ಬಹುಮಾನ ಒಂದು ಲಕ್ಷ ರೂಪಾಯಿ ಹಾಗೂ ಮರಾಠ ಟ್ರೋಫಿ ಮತ್ತು ದ್ವಿತೀಯ ಸ್ಥಾನ ಛತ್ರಪತಿ ಪಡೀಲ್ ತಂಡ ನಗದು 50,000 ರೂಪಾಯಿ ಹಾಗೂ ಮರಾಠ ಟ್ರೋಫಿ ತೃತೀಯ ಸ್ಥಾನ 15,000 ಹಾಗೂ ಟ್ರೋಫಿ ಗ್ರೇಟ್ ಮುಕಾಂಬಿಕಾ ತನ್ನದಾಗಿಸಿಕೊಂಡು, ಮಹಿಳಾ ವಿಭಾಗದಲ್ಲಿ ಅಂಬಾಭವಾನಿ ಕ್ರಿಕೆಟರ್ಸ್ ಆದೂರು ತಂಡವು ಪ್ರಥಮ ಸ್ಥಾನ ರೂಪಾಯಿ 15000 ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಕ್ವೀನ್ ಇಲೆವೆನ್ ಕುಡ್ಲ ತಂಡವು ರೂಪಾಯಿ 10,000 ಹಾಗೂ ಟ್ರೋಫಿ ತೃತೀಯ ಸ್ಥಾನ ಯುವ ಮರಾಠ ಕುಂಪಳ 5000 ಹಾಗೂ ಟ್ರೋಫಿ ಯನ್ನು ಪಡೆದುಕೊಂಡಿರುತ್ತಾರೆ, ಪುರುಷರ ವಿಭಾಗದಲ್ಲಿ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಛತ್ರಪತಿ ತಂಡದ ಹರ್ಷಿತ್ ಪಡಕೊಂಡರು. ಬೆಸ್ಟ್ ಬೌಲರ್ ಆಗಿ ಶಿವಶಕ್ತಿ ಬಾಯ್ಸ್ ಜಮಾಖಂಡಿ ತಂಡದ ಶಿವಾಜಿ ಹಾಗೂ ಮ್ಯಾನ್ ಆಫ್ ದ ಸೀರಿಸ್ ಟ್ರೋಫಿಯನ್ನು ಶಿವಶಕ್ತಿ ಬಾಯ್ಸ್ ಜಮಾಖಂಡಿ ತಂಡದ ಅರುಣ್ ಅವರಿಗೆ ದೊರಕಿತು. ಮಹಿಳಾ ವಿಭಾಗದಲ್ಲಿ ಬೆಸ್ಟ್ ಬ್ಯಾಟ್ಸ್ ವುಮನ್ ಆಗಿ ಅಂಬಾಭವಾನಿ ಕ್ರಿಕೆಟರ್ಸ್ ತಂಡದ ರಿಥಿಕ ಪಡೆದುಕೊಂಡರೆ ಹಾಗೂ ಬೌಲರ್ ಹಾಗೂ ವುಮೆನ್ಸ್ ಆಫ್ ದ ಸೀರಿಸ್ ಕ್ವೀನ್ಸ್ ಇಲೆವೆನ್ ಕುಡ್ಲ ತಂಡದ ರೇಷ್ಮಾ ತಮ್ಮದಾಗಿಸಿಕೊಂಡರು. ಸಮಾರೋಪ ಸಮಾರಂಭ ನಮ್ಮ ನೆಚ್ಚಿನ ಶಾಸಕರಾದ ಡಿ ವೇದವ್ಯಾಸ ಕಾಮತ್ ಸಮ್ಮುಖದಲ್ಲಿ ನಡೆಯಿತು. ಅಸೋಸಿಯೇಷನ್ ಗೌರವಾಧ್ಯಕ್ಷರಾದ ರವೀಂದ್ರ ನಿಕಂ ಹಾಗೂ ಅಧ್ಯಕ್ಷರಾದ ಉದಯಶಂಕರ್ ಜಾದವ್, ಗಣೇಶ್ ಕಾಂದಾರೆ, ಗಿರೀಶ್ ರಾವ್ ಭೋಂಸ್ಲೆ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು .
ಶ್ರೀಮತಿ ಸಾರಿಕಾ ಶ್ರೀ ಭೋಂಸ್ಲೆ ಹಾಗೂ ಶ್ರೀಮತಿ ಯಶ್ವತ ದರೆಕರ್ ಸ್ವಾಗತಿಸಿದರು ಹಾಗೂ ಶ್ರೀಮತಿ ವಾಣಿ ಮೋರೆ ಮತ್ತು ಶ್ರೀಮತಿ ಪೂರ್ಣಿಮಾ ಚಂದ್ರಮಾನ್ ವಂದಿಸಿದರು.