ಎಐಸಿಸಿ ಸದಸ್ಯರಾಗಿ ರಮಾನಾಥ ರೈ, ಖಾದರ್, ಭಂಡಾರಿ, ಐವನ್ ನೇಮಕ

Spread the love

ಎಐಸಿಸಿ ಸದಸ್ಯರಾಗಿ ರಮಾನಾಥ ರೈ, ಖಾದರ್, ಭಂಡಾರಿ, ಐವನ್ ನೇಮಕ

ಮಂಗಳೂರು: ಅಖಿಲ ಭಾರತ ಕಾಂಗ್ರೆಸ್ ಪಕ್ಷದ ನೂತನ ಸದಸ್ಯರಾಗಿ ದ.ಕ. ಜಿಲ್ಲೆಯಿಂದ ಮಾಜಿ ಸಚಿವರಾದ ಬಿ.ರಮಾನಾಥ ರೈ, ಶಾಸಕರಾದ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಹಾಗೂ ಮಾಜಿ ಶಾಸಕರಾದ ಐವನ್ ಡಿಸೋಜಾ ಅವರು ಚುನಾಯಿತರಾಗಿದ್ದಾರೆ.

ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವರಾದ ಅಭಯಚಂದ್ರ ಜೈನ್ ಹಾಗೂ ವಿಷಯ ಪರಿಣಿತರಾಗಿ ಪಿಸಿಸಿ ಉಪಾಧ್ಯಕ್ಷರಾದ ಪಿ.ವಿ. ಮೋಹನ್ ಅವರನ್ನು ನೇಮಿಸಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಆದೇಶಿಸಿರುವುದಾಗಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love