Home Mangalorean News Kannada News ಎಕೆ ಎಮ್ ಎಸ್ ಬಸ್ಸಿನ ಮ್ಹಾಲಕ, ರೌಡಿ ಶೀಟರ್ ಸೈಫುದ್ದೀನ್ ಹತ್ಯೆ

ಎಕೆ ಎಮ್ ಎಸ್ ಬಸ್ಸಿನ ಮ್ಹಾಲಕ, ರೌಡಿ ಶೀಟರ್ ಸೈಫುದ್ದೀನ್ ಹತ್ಯೆ

Spread the love

ಎಕೆ ಎಮ್ ಎಸ್ ಬಸ್ಸಿನ ಮ್ಹಾಲಕ, ರೌಡಿ ಶೀಟರ್ ಸೈಫುದ್ದೀನ್ ಹತ್ಯೆ

ಉಡುಪಿ:   ಎಕೆಎಂಎಸ್ ಬಸ್ ಮಾಲಕ ಸೈಪು ಯಾನೇ ಸೈಫುದ್ದೀನ್ ಆತ್ರಾಡಿಯನ್ನು ಹತ್ಯೆಗೈದಿರುವ ಘಟನೆ ಇಂದು(ಶನಿವಾರ) ಬೆಳಿಗ್ಗೆ ಕೊಡವೂರು ಸಮೀಪದ ಸಾಲ್ಮರ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಸೈಫುದ್ದೀನ್ ಅವರು ತಮ್ಮ ಮನೆಯಲ್ಲಿ ಒಬ್ಬರೇ ಇರುವ ವೇಳೆ ಆಗಮಿಸಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಡಿವೈಎಸ್ಪಿ ಪ್ರಭು ಡಿಟಿ ಮೊದಲಾದವರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ನನ್ನು ಮೂವರು ದುಷ್ಕರ್ಮಿಗಳು ಮಾರಕಾಯಧಗಳಿಂದ ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಕೃತ್ಯವನ್ನು ಆತನ ಬಸ್ಸಿನಲ್ಲಿ ಚಾಲಕರಾಗಿ ದುಡಿಯುತ್ತಿದ್ದ ಮೂವರು ಆರೋಪಿಗಳು ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಸೈಫುದ್ದಿನ್ ವಿರುದ್ಧ ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಉಡುಪಿ ಮತ್ತು ಮಲ್ಪೆ ಪೊಲೀಸ್ ಠಾಣೆಗಳಲ್ಲಿ ರೌಡಿಶೀಟರ್ ಆಗಿದ್ದಾರೆ. ಎರಡು ಕೊಲೆ ಪ್ರಕರಣದ ನೇರ ಆರೋಪಿಯಾಗಿದ್ದಾನೆ ಎಂದರು. ಬೆಳಗ್ಗೆ 10 ರಿಂದ 11 ಗಂಟೆಯ ನಡುವೆ ದುಷ್ಕೃತ್ಯ ನಡೆದಿದೆ. ಮೂರು ಜನ ಆರೋಪಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ. ಆರೋಪಿಗಳು AKMS ಖಾಸಗಿ ಬಸ್ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದಾರೆ.

ಕೊಲೆಗೆ ಕಾರಣ ಮತ್ತು ಆರೋಪಿಗಳ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದರು. ಕೊಲೆಗೆ ನಿಖರ ಕಾರಣ ತನಿಖೆಯಿಂದ ಬಹಿರಂಗವಾಗಬೇಕಾಗಿದೆ. ಚಾಕು ಮತ್ತು ತಲವಾರ್ ನಿಂದ ದಾಳಿ ಮಾಡಿದ್ದಾರೆ. ದೇಹದ ಹಲವೆಡೆ ಇರಿದ ಗಾಯಗಳಿವೆ ಎಂದು ಅವರು ತಿಳಿಸಿದರು.


Spread the love

Exit mobile version