ಎಜಿ ಕೊಡ್ಗಿಯವರು ಅಭಿವೃದ್ದಿಯ ಕನಸುಗಾರರು: ಸಂಸದೆ ಶೋಭಾ ಕರಂದ್ಲಾಜೆ

Spread the love

ಎಜಿ ಕೊಡ್ಗಿಯವರು ಅಭಿವೃದ್ದಿಯ ಕನಸುಗಾರರು: ಸಂಸದೆ ಶೋಭಾ ಕರಂದ್ಲಾಜೆ

ಕುಂದಾಪುರ: ಕರಾವಳಿ ನೀರಿನ ಸೌಲಭ್ಯಕ್ಕಾಗಿ ದಶಕಗಳಿಂದ ಹೋರಾಟ ಮಾಡಿದ ಎಜಿ ಕೊಡ್ಗಿಯವರು ಸೌಭಾಗ್ಯ ಸಂಜೀವಿನಿ ಯೋಜನೆ ಅವರ ಕನಸಾಗಿತ್ತು ಚಿಕ್ಕ ವಯಸ್ಸಲ್ಲೇ ರಾಜಕೀಯ‌ರಂಗಕ್ಕೆ‌ ಪ್ರವೇಶಿಸಿ‌ ಹಲವು ಕನಸು ಕಂಡವರು ಅವರು ಅಭಿವೃದ್ದಿಯ ಕನಸುಗಾರರು ಎಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಮಂಗಳವಾರ ಮೃತ ಎಜಿ ಕೊಡ್ಗಿಯವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ಹಾಲಾಡಿಯವರನ್ನು ಚುನಾವಣೆಗೆ ನಿಲ್ಲಿಸುವಲ್ಲಿ ಕೊಡ್ಗಿಯವರ ಪಾತ್ರ ದೊಡ್ಡದಾಗಿದ್ದು, ನಾನು ರಾಜಕೀಯ ಪ್ರಾರಂಭ‌ ಮಾಡಿದ್ದು ಎಜಿ ಕೊಡ್ಗಿಯವರ ಕೈಕೆಳಗೆ ಆಗಿದ್ದು ಸಂಘ ಹಾಗೂ ಭಾರತೀಯ ಕಿಸಾನ್ ಸಂಘದಲ್ಲಿ ನಾನು ಕೆಲಸ‌ ಮಾಡುತ್ತಿದ್ದೆ. ಇದ್ದಕ್ಕಿದ್ದಂತೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನನ್ನನ್ನು ನೇಮಕ‌ ಮಾಡಿದ್ದರು
ಸಂಘದಲ್ಲಿ ಈ ಪದ್ದತಿ ಇಲ್ಲ ಎಂದರೂ ಆ ಸಂದರ್ಭದಲ್ಲಿ ಅವರು ಕೇಳಿರಲಿಲ್ಲ ಮಣಿಪಾಲದಲ್ಲಿ ಉದ್ಯೋಗದಲ್ಲಿರುವ ಸಂದರ್ಭದಲ್ಲಿ ಈ ಜವಾಬ್ದಾರಿ ಘೋಷಣೆ ಮಾಡಿದರು ನನಗೆ ಬಿಜೆಪಿಯ ಮೊದಲ ಜವಾಬ್ದಾರಿ ಘೋಷಣೆ ಮಾಡಿದವರು ಕೊಡ್ಗಿಯವರು ಎಂದರು.

ಕೊಡ್ಗಿಯವರು ಕರೆ ಮಾಡಿದರು ಎಂದರೆ ಬೈತಾರೆ ಅಂತಲೇ ಲೆಕ್ಕ ಎಲ್ಲರದ್ದೂ, ಅಭಿವೃದ್ದಿ ಕೆಲಸಗಳ ಸಲುವಾಗಿ ಅವರಿಗೆ ಸಾಕಷ್ಟು ಕಾಳಜಿ ಇತ್ತು ಈ‌ ಕಾರಣಕ್ಕಾಗಿಯೇ ಅವರ ಜೊತೆ ಸಾಕಷ್ಟು ಬಾರಿ ಬೈಸಿಕೊಂಡಿದ್ದೇನೆ. ಶಾಸಕರಾಗಿ ಹಲವು ಹುದ್ದೆಗಳನ್ನು ಏರಿ‌ ಅವಿಭಜಿತ ದ.ಕ ಜಿಲ್ಲೆಯಲ್ಲಿ ನಿಷ್ಠೆಯಿಂದ ಕೆಲಸ‌ ಮಾಡಿದ ಅವರಿಗೆ
ವ್ಯವಸ್ಥೆಯನ್ನು ಸುಧಾರಣೆ ಮಾಡಬೇಕೆನ್ನುವ ವಿಶೇಷವಾದ ಕಾಳಜಿ ಇತ್ತು. ಕೊಡ್ಗಿಯವರು ಭೇಟಿಯಾಗುತ್ತಾರೆಂದರೆ ಮುಖ್ಯಮಂತ್ರಿಗಳು ಕೂಡ ಕನಿಷ್ಠ ಒಂದು ಗಂಟೆ ಮೀಸಲಿಡುತ್ತಿದ್ದರು ಕಾರಣ ಎಲ್ಲಾ ವಿಷಯಗಳಲ್ಲೂ ಅವರಿಗೆ ಅಷ್ಟರಮಟ್ಟಿಗೆ ಜ್ಞಾನವಿತ್ತು ಎಂದರು.

ಹತ್ತು ದಿನಗಳ ಹಿಂದಷ್ಟೇ ಕರೆ ಮಾಡಿದ್ದರು. ತೊಂಭತ್ತನಾಲ್ಕರ ವಯಸ್ಸಲ್ಲೂ ಅವರ ಉತ್ಸಾಹ ಕುಗ್ಗಿರಲಿಲ್ಲ ಭಾಜಪವನ್ನು ಈ ಜಿಲ್ಲೆಯಲ್ಲಿ ಕಟ್ಟಿ ಬೆಳೆಸಲು ಕೊಡ್ಗಿಯವರ ಪಾತ್ರ ಬಹಳ ಮುಖ್ಯವಾಗಿದೆ ಇಂತಹ ಮೇರು ವ್ಯಕ್ತಿತ್ವದ ನಾಯಕ ಇಂದು ನಮ್ಮೊಂದಿಗಿಲ್ಲದಿರುವುದು ನೋವಿನ ವಿಚಾರ. ಅವರ ಮಾತಲ್ಲಿ ಪ್ರೀತಿ ಇರುತಿತ್ತು, ಚೆನ್ನಾಗಿ ಕೆಲಸ‌ ಮಾಡಬೇಕೆನ್ನುವ ಕಾಳಜಿ‌ ಇತ್ತು ಖಂಡಿತ ಅವರ ಭಾವನೆಯಂತೆ ಮುಂದೆ ಕೆಲಸ‌‌ ಮಾಡುವ ಪ್ರಯತ್ನ‌ ಮಾಡುತ್ತೇವೆ ತೊಂಭತ್ತನಾಲ್ಕು ಎಂದರೆ ಚಿಕ್ಕ‌‌ ವಯಸ್ಸಲ್ಲ, ತುಂಬು ಜೀವನವನ್ನು ನಡೆಸಿದ್ದಾರೆ ಎಂದರು.


Spread the love