ಎಡಪಂಥೀಯ ವಿಚಾರಧಾರೆಗಳಿಂದ ಮಾತ್ರವೇ ದೇಶ ಉಳಿಸಲು ಸಾಧ್ಯ – ಸುನಿಲ್ ಕುಮಾರ್ ಬಜಾಲ್

Spread the love

ಎಡಪಂಥೀಯ ವಿಚಾರಧಾರೆಗಳಿಂದ ಮಾತ್ರವೇ ದೇಶ ಉಳಿಸಲು ಸಾಧ್ಯ – ಸುನಿಲ್ ಕುಮಾರ್ ಬಜಾಲ್

ಒಂದು ಕಡೆ ಜಾತಿ ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕಾರ್ಯ ನಡೆದರೆ ಮತ್ತೊಂದು ಕಡೆ ಜಾಗತೀಕರಣ ಉದಾರೀಕರಣ ಖಾಸಗೀಕರಣ ನೀತಿಗಳ ಫಲವಾಗಿ ದೇಶದ ಆರ್ಥಿಕತೆಯನ್ನೇ ನಾಶ ಮಾಡಲಾಗುತ್ತಿದೆ.ಇದರಿಂದಾಗಿ ಹಿಂದುತ್ವ ಸರ್ವಾದಿಕಾರಶಾಹಿ ಹಾಗೂ ಕಾರ್ಪೊರೇಟ್ ನವ ಉದಾರವಾದದ ಒಂದು ವಿಷಕಾರಿ ಮಿಶ್ರಣದಿಂದ ದೇಶ ಗಂಬೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ಎಡಪಂಥೀಯ ವಿಚಾರಧಾರೆಗಳಿಂದ ಮಾತ್ರವೇ ದೇಶವನ್ನು ಹಾಗೂ ಜನತೆಯ ಬದುಕನ್ನು ಉಳಿಸಲು ಸಾಧ್ಯ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಅಭಿಪ್ರಾಯ ಪಟ್ಟರು.

ಅವರು ಕೂಳೂರಿನಲ್ಲಿ ಜರುಗಿದ CPIM ಮಂಗಳೂರು ನಗರ ಉತ್ತರ ಸಮ್ಮೇಳನವನ್ನು ಉದ್ಘಾಟಿಸುತ್ತಾ, ಈ ಮಾತುಗಳನ್ನು ಹೇಳಿದರು.

ಮುಂದುವರಿಸುತ್ತಾ ಅವರು, ದೇಶದ ಪ್ರಧಾನಿಯೇ ದಿನಬೆಳಗಾದರೆ ಹಸಿ ಹಸಿ ಸುಳ್ಳನ್ನು ಹೇಳುತ್ತಾ, ಜನತೆಯಲ್ಲಿ ಭ್ರಮೆಯನ್ನು ಸ್ರಷ್ಟಿಸುತ್ತಿದ್ದಾರೆ. ದೇಶದ ಆರ್ಥಿಕತೆಯನ್ನೇ ಸರ್ವನಾಶ ನಾಡಿ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದ ನರೇಂದ್ರ ಮೋದಿ ಸರಕಾರವನ್ನು ಅತ್ಯಂತ ಶೀಘ್ರದಲ್ಲಿ ಕಿತ್ತೆಸೆಯದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಹೇಳಿದರು

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಮಾಜಿ ಕಾರ್ಪೋರೇಟರ್,CPIM ಮಂಗಳೂರು ನಗರ ಉತ್ತರ ಕಾರ್ಯದರ್ಶಿ ದಯಾನಂದ ಶೆಟ್ಟಿಯವರು ಮಾತನಾಡುತ್ತಾ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಜ್ಜೆ ಹೆಜ್ಜೆಗೂ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದ್ದು,ಅದರ ವಿರುದ್ದ ಪ್ರಬಲ ಜನಚಳುವಳಿಯು ಬೆಳೆದು ಬರಬೇಕಾಗಿದೆ.ಕಾರ್ಮಿಕ ವರ್ಗದ ಹಾಗೂ ರೈತಾಪಿ ಜನತೆಯ ಐಕ್ಯ ಚಳುವಳಿ ಮಾತ್ರವೇ ದೇಶಕ್ಕೆ ಆಶಾಕಿರಣ ಎಂದು ಹೇಳಿದರು.

ಕಳೆದ ಹಲವು ವರ್ಷಗಳಿಂದ ದುಡಿಯುವ ವರ್ಗದ ಚಳುವಳಿಗಾಗಿ ಅವಿಶ್ರಾಂತ ವಾಗಿ ಶ್ರಮಿಸಿದ ಪಕ್ಷದ ಹಿರಿಯ ಸದಸ್ಯರಾದ ತುಕಾರಾಮ ಕೊಂಚಾಡಿ,ನಾರಾಯಣ ಕೊಂಚಾಡಿ, ಸುಕುಮಾರ್ ಮಾಲೆಮಾರ್ ರವರನ್ನು ಸಮ್ಮೇಳನದಲ್ಲಿ ಗೌರವಿಸಲಾಯಿತು. ಪ್ರಾರಂಭದಲ್ಲಿ ಪಕ್ಷದ ಹಿರಿಯ ಸದಸ್ಯರಾದ ನಾರಾಯಣ ಕೊಂಚಾಡಿಯವರು ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ CPIM ಮಂಗಳೂರು ನಗರ ಉತ್ತರ ಸಮಿತಿ ನಾಯಕರಾದ ಬಾಬು ದೇವಾಡಿಗ,ಅಶೋಕ್ ಶ್ರೀಯಾನ್,ಬಿ.ಕೆ.ಇಮ್ತಿಯಾಜ್,ರವಿಚಂದ್ರ ಕೊಂಚಾಡಿ, ನವೀನ್ ಕೊಂಚಾಡಿ,ಸಮ್ಮೇಳನದ ಸ್ವಾಗತ ಸಮಿತಿ ಮುಖಂಡರಾದ ಅಹಮ್ಮದ್ ಬಶೀರ್,ಅನಿಲ್ ಡಿಸೋಜ, ಮುಸ್ತಾಫ,ಶೆರೀಪ್ ಯವರು ಹಾಜರಿದ್ದರು.

ಪ್ರಾರಂಭದಲ್ಲಿ ಅಹಮ್ಮದ್ ಬಶೀರ್ ರವರು ಸ್ವಾಗತಿಸಿದರೆ, ಕೊನೆಯಲ್ಲಿ ಸಂತೋಷ್ ಡಿಸೋಜರವರು ವಂದಿಸಿದರು.


Spread the love

1 Comment

  1. Communism was opposed to religion. I understand but dont agree. But in India they have taken an extreme stand of being against Hindus – unfortunate.

Comments are closed.