ಎಡ್ಲಿನ್ ಗ್ಲೇನ್ ಮತಾಯಸ್ ಅವರಿಗೆ ಪಿ.ಎಚ್.ಡಿ ಗೌರವ

Spread the love

ಎಡ್ಲಿನ್ ಗ್ಲೇನ್ ಮತಾಯಸ್ ಅವರಿಗೆ ಪಿ.ಎಚ್.ಡಿ ಗೌರವ

ಉಡುಪಿ: ಮಾಹೆ ವಿಶ್ವವಿದ್ಯಾನಿಲಯದ ನರ್ಸಿಂಗ್ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ “ಎಡ್ಲಿನ್ ಗ್ಲೇನ್ ಮತಾಯಸ್” ಅವರು ಮಣಿಪಾಲ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕಿ ಡಾ|| ಮಮತಾ ಎಸ್. ಪೈ ಮಾರ್ಗದರ್ಶನ ಹಾಗೂ ಕೆ.ಎಂ.ಸಿ. ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ (HOD) ಡಾ| ವಿಜಯ ಕುಮಾರ್ ಸಹ ಮಾರ್ಗದರ್ಶನದಲ್ಲಿ “The efficacy of Nurse Assisted Distraction Strategies on post-operative pain experience: A cluster randomized controlled trial among pediatric surgery children in a tertiary care hospital, Karnataka” ಎಂಬ ವಿಷಯದ ಮೇಲೆ ನಡೆಸಿದ ಸಂಶೋಧನೆಯನ್ನು ಪುರಸ್ಕರಿಸಿ ಮಾಹೆ ವಿಶ್ವವಿದ್ಯಾನಿಲಯವು ಪಿ.ಎಚ್.ಡಿ ನೀಡಿ ಗೌರವಿಸಿದೆ.

ಇವರು ಬರೆದ ಲೇಖನಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಇವರು ಶಿರ್ವದ ಸೊರ್ಪು ಎಲಿಜಾ ಗಿಲ್ಬರ್ಟ್ ಮತಾಯಸ್‍ರವರ ಸುಪುತ್ರಿ ಹಾಗೂ ಶಿರ್ವ ಇಗ್ನೇಶಿಯಸ್ ಡಿಸೋಜರವರ ಸೊಸೆ, ಉಡುಪಿಯ ನ್ಯಾಯವಾದಿ ಮೆಲ್ವಿನ್ ಡಿಸೋಜರವರ ಧರ್ಮಪತ್ನಿಯಾಗಿರುತ್ತಾರೆ.


Spread the love