ಎನ್.ಎಸ್.ಯು.ಐ “ಕ್ಯಾಂಪಸ್ ಗೇಟ್ ಮೀಟ್” ಅಭಿಯಾನಕ್ಕೆ ಚಾಲನೆ

Spread the love

ಎನ್.ಎಸ್.ಯು.ಐ “ಕ್ಯಾಂಪಸ್ ಗೇಟ್ ಮೀಟ್” ಅಭಿಯಾನಕ್ಕೆ ಚಾಲನೆ

ಜಿಲ್ಲೆಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಯನ್ನು ಸರ್ಕಾರಕ್ಕೆ ಮುಟ್ಟಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇಂದಿನಿಂದ ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆರಂಭಿಸಿದ “ಕ್ಯಾಂಪಸ್ ಗೇಟ್ ಮೀಟ್” ಅಭಿಯಾನಕ್ಕೆ ನಗರದ ಶ್ರೀದೇವಿ ಕಾಲೇಜ್ ಮುಂಭಾಗ ಚಾಲನೆ ನೀಡಲಾಯಿತು.

ಅಭಿಯಾನವನ್ನುದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ಎನ್.ಎಸ್.ಯು.ಐ ಅಧ್ಯಕ್ಷ ಸವಾದ್ ಸುಳ್ಯ, ಜಿಲ್ಲೆಯ ವಿಧ್ಯಾರ್ಥಿಗಳು ಎದುರಿಸುತ್ತಿರುವ ಸ್ಕಾಲರ್ ಶಿಪ್ ಸಮಸ್ಯೆ, ಬಸ್ ಪಾಸ್ ಸಮಸ್ಯೆ, ಮಂಗಳೂರು ವಿವಿಯ ಪರೀಕ್ಷಾ ಫಲಿತಾಂಶ ವಿಳಂಬ, ವಿದ್ಯಾರ್ಥಿ ವೇತನ ರದ್ದು, ಹಾಸ್ಟೆಲ್ ಸಮಸ್ಯೆ, ಕ್ಯಾಪಂಸ್ ನಲ್ಲಿ ನಡೆಯುವ ನೈತಿಕ ಪೊಲೀಸ್ ಗಿರಿ, ರ್ಯಾಗಿಂಗ್ ಹಾಗೂ ಮಾಧಕ ದ್ರವ್ಯ ವಿರುದ್ಧ ಜಾಗೃತಿ ಮುಂತಾದ ಹಲವಾರು ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಂದ ಫಾರ್ಮ್ ಮುಖಾಂತರ ದತ್ತಾಂಶ ಸಂಗ್ರಹಿಸಿ ಸರ್ಕಾರದ ಮುಂದಿಟ್ಟು ಪರಿಹಾರಕ್ಕೆ ಹೋರಾಟ ನಡೆಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ರಾಜ್ಯ ಪ್ರ.ಕಾರ್ಯದರ್ಶಿ ಸುಹಾನ್ ಆಳ್ವ, ಜಿಲ್ಲಾ ಪ್ರ.ಕಾರ್ಯದರ್ಶಿ ಸಫ್ವಾನ್ ಕುದ್ರೋಳಿ, ಮುಖಂಡರಾದ ನಜೀಬ್ ಮಂಚಿ, ಸಾಹಿಲ್, ಓಂಶ್ರೀ, ಸೌರಭ್ ಹಾಗೂ ಕಾಲೇಜ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love