ಎನ್.ಎಸ್.ಯು.ಐ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿ ಫಾರೂಕ್ ಬಾಯಬೆ ಆಯ್ಕೆ

Spread the love

ಎನ್.ಎಸ್.ಯು.ಐ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿ ಫಾರೂಕ್ ಬಾಯಬೆ ಆಯ್ಕೆ

ನೂತನವಾಗಿ ಆಯ್ಕೆಯಾದ ಕರ್ನಾಟಕ ರಾಜ್ಯ ಎನ್.ಎಸ್.ಯು.ಐ ಸಮಿತಿಗೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆದಿಲ ಗ್ರಾಮದ ಫಾರೂಕ್ ಬಾಯಬೆಯವರನ್ನು ಆಯ್ಕೆ ಮಾಡಿ ಎನ್.ಎಸ್.ಯು.ಐ ರಾಷ್ಟ್ರೀಯ ಸಮಿತಿ ಅಧ್ಯಕ್ಷ ನೀರಜ್ ಕುಂದನ್ ಆದೇಶ ಹೊರಡಿಸಿದ್ದಾರೆ.

ಕಳೆದ 8 ವರ್ಷಗಳಿಂದ ಸಂಘಟನೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಬಾಯಬೆಯವರು 2013ರಲ್ಲಿ ಶ್ರೀನಿವಾಸ್ ತಾಂತ್ರಿಕ ಮಹಾವಿದ್ಯಾಲಯದ ಎನ್.ಎಸ್.ಯು.ಐ ಕಾಲೇಜು ಸಮಿತಿ ಅಧ್ಯಕ್ಷರಾಗಿ, 2015 ರಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಎನ್.ಎಸ್.ಯು.ಐ ಉಸ್ತುವಾರಿ ಆಗಿ,2016ರಲ್ಲಿ ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಪದಾಧಿಕಾರಿಯಾಗಿ ಹಲವಾರು ಜವಾಬ್ದಾರಿಯನ್ನು ವಹಿಸಿ, ನಂತರ ಎನ್.ಎಸ್.ಯು.ಐ ಸಂಘಟನೆಗೆ ನಡೆದ ಚುನಾವಣೆಯಲ್ಲಿ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ನಿಂತು ಅತೀ ಹೆಚ್ಚು ಮತಗಳಿಂದ ಚುನಾಯಿತಾನಾಗಿ ನಂತರ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿ ನೂತನ ಸಮಿತಿಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಾಗೊಂಡಿದ್ದಾರೆ. ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆ ನಡೆಸಿದ ವಿವಿಧ ಸಭೆಗಳಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗಿ ಬಾಗವಹಿಸಿದ್ದಾರೆ.ಈ ಬಾರಿಯ ಎನ್.ಎಸ್.ಯು.ಐ ರಾಷ್ಟ್ರೀಯ ಸಮಿತಿಯು ಅಂತಿಮಗೊಳಿಸಿದ ರಾಜ್ಯಾಧ್ಯಕ್ಷ ಆಕಾಂಕ್ಷಿಗಳ 4 ಮಂದಿಯ ಪಟ್ಟಿಯಲ್ಲಿ ಫಾರೂಕ್ ಬಾಯಬೆಯವರ ಹೆಸರು ಆಯ್ಕೆಯಾಗಿತ್ತು.1982ರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ವಿನಯ್ ಕುಮಾರ್ ಸೊರಕೆ ಎನ್.ಎಸ್.ಯು.ಐ ರಾಜ್ಯಾಧ್ಯಕ್ಷರಾದ ಬಳಿಕ ಎನ್.ಎಸ್.ಯು.ಐ ರಾಜ್ಯ ಸಮಿತಿಯಲ್ಲಿ ಉನ್ನತ ಹುದ್ದೆ ಅಲಂಕರಿಸಿದ ಕೀರ್ತಿ ಫಾರೂಕ್ ಬಾಯಬೆ ಅವರಿಗೆ ಸಲ್ಲುತ್ತದೆ.


Spread the love