
ಎನ್ ಐ ಎ ವಶದಲ್ಲಿರುವ ಯುವಕನ ತಂದೆಯ ವಿಚಾರಣೆ ನಡೆಯಲಿ – ದಿನೇಶ್ ಮೆಂಡನ್
ಉಡುಪಿ: ಮಂಗಳೂರು ಮತ್ತು ಶಿವಮೊಗ್ಗ ದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂದಿಸಿ ಬಂಧಿತನ ತಂದೆ ಕಾಂಗ್ರೆಸ್ ಮುಖಂಡ ತಾಜುದ್ದೀನ್ ಇಬ್ರಾಹಿಂ ವಿಚಾರಣೆ ನಡೆಯಲಿ ಎಂದು ವಿಶ್ವ ಹಿಂದು ಪರಿಷದ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಆಗ್ರಹಿಸಿದ್ದಾರೆ
ಉಡುಪಿ ಜಿಲ್ಲೆಯ ಬ್ರಹ್ಮಾವರದ ರಿಶಾನ್ ತಾಜುದ್ದೀನ್ ಶೇಖ್ ನನ್ನು ಕುಕ್ಕರ್ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ವಶದಲ್ಲಿರುವ ಯುವಕನ ತಂದೆಯನ್ನು ಕೂಡ ವಿಚಾರಣೆಗೆ ಒಳಪಡಿಸಬೇಕು. ಇಡೀ ದೇಶದಲ್ಲಿ ಯಾವುದೇ ಕಡೆಗಳಲ್ಲಿ ಭಯೋತ್ಪಾದನೆ ಕೃತ್ಯ ನಡೆದಾಗ ಅವರ ಪರವಾಗಿ ಮಾತನಾಡುವ ಕಾಂಗ್ರೆಸ್ ನಾಯಕರು ಪರೋಕ್ಷವಾಗಿ ಬೆಂಬಲಿಸಿ ಅವರನ್ನು ಬೆಂಬಲಿಸುವ ಕೆಲಸ ಮಾಡುತ್ತಿದ್ದು ಬಂಧಿತನ ತಂದೆ ಕೂಡ ಕಾಂಗ್ರೆಸ್ ಪಕ್ಷದ ನಾಯಕನಾಗಿದ್ದು ಕೃತ್ಯದಲ್ಲಿ ಭಾಗಿಯಾಗಿರುವ ಮಗನಿಗೆ ಪರೋಕ್ಷವಾಗಿ ಬೆಂಬಲಿಸಿದ ಬಗ್ಗೆ ಸಂಶಯ ಮೂಡುತ್ತದೆ. ಹಾಗಾಗಿ ತಕ್ಷಣ ಆತನನ್ನು ಕೂಡ ವಿಚಾರಣೆಗೆ ಒಳಪಡಿಸಬೇಕೆಂದು ದಿನೇಶ್ ಮೆಂಡನ್ ಆಗ್ರಹಿಸಿದ್ದಾರೆ