ಎಬಿವಿಪಿ ವತಿಯಿಂದ ಪುಲ್ವಾಮ ಹುತಾತ್ಮರ ಸ್ಮರಣಾರ್ಥ ಯೋಧ ನಮನ

Spread the love

ಎಬಿವಿಪಿ ವತಿಯಿಂದ ಪುಲ್ವಾಮ ಹುತಾತ್ಮರ ಸ್ಮರಣಾರ್ಥ ಯೋಧ ನಮನ

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರದ ವತಿಯಿಂದ ಪುಲ್ವಾಮ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಯೋಧ ನಮನ ಕಾರ್ಯಕ್ರವನ್ನು ಕದ್ರಿ ಯುಧ್ದ ಸ್ಮಾರಕದಲ್ಲಿ ಹಮ್ಮಿಕೊಳ್ಳಲಾಗಿತ್ತು

ನಮ್ಮ ಈ ಕಾಲ ಘಟ್ಟದಲ್ಲಿ ನಾವುಗಳು ಕಂಡಂತಹ ಒಂದು ದುರ್ಘಟನೆ ನಮ್ಮೆಲ್ಲರ ಕಣ್ಣಂಚಲ್ಲಿ ಕಂಬನಿ ಮಿಡಿಯುವಂತೆ ಮಾಡಿದ್ದು ಅದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪುಲ್ವಾಮದಲ್ಲಿ ಉಗ್ರಗಾಮಿಗಳು ನಡೆಸಿದಂತಹ ಬಾಂಬ್ ಸ್ಪೋಟ ,. ನಮ್ಮಿಂದ 2019ರ ಫೆಬ್ರವರಿಯ ಈ ಕರಾಳ ದಿನವನ್ನು ಇನ್ನು ಸಹ ಮರೆಯಲು ಸಾಧ್ಯವಾಗುತ್ತಿಲ್ಲ , ನಮ್ಮ ಯೋಧರ ಬಲಿದಾನ ವ್ಯರ್ತವಾಗಲು ಈ ದೇಶ ಕಂಡಿತ ಬಿಡುವುದಿಲ್ಲ .

ಇನ್ನು ಮುಂದೆ ಈ ರೀತಿ ಘಟನೆ ನಮ್ಮ ದೇಶದಲ್ಲಿ ನಡೆಯದೆ ಇರಲಿ. ದೇಶವನ್ನು ಬಾಹ್ಯ ವಿರೋದಿಗಳಿಂದ ನಮ್ಮ ಸೈನಿಕರು ಜೀವತ್ತೆತ್ತು ಕಾಪಾಡುತ್ತಿದ್ದಾರೆ ಆದರೆ ಆಂತರಿಕವಾಗಿ ಸಾಮರಸ್ಯವನ್ನು ಕೆದಡಲು ಹಲವರು ಪ್ರಯತ್ನಿಸುತ್ತಿದ್ದಾರೆ ಇದು ನಮ್ಮ ದೇಶಕ್ಕೆ ಮಾರಕವಾದದ್ದು , ನಾವುಗಳು ಸದಾ ನಮ್ಮ ದೇಶದ ಪರವಾಗಿ ನಿಲ್ಲುವಂತಹ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ನಮ್ಮ ಯೋದ ನಮ್ಮ ಹೆಮ್ಮೆ ಎಂದು ರಾಜ್ಯ ಕಾರ್ಯ ಸಮಿತಿ ಸದಸ್ಯರಾದ ಮಣಿಕಂಠ ಕಳಸ ಹೇಳಿದರು .

ವಿದ್ಯಾರ್ಥಿ ಪರಿಷತ್ನ ಕಾರ್ಯಕರ್ತರು ಕದ್ರಿ ಯುಧ್ದ ಸ್ಮಾರಕವನ್ನು ಸ್ವಚ್ಛಗೊಳಿಸಿ ಪುಷ್ಪಾರ್ಚನೆ ಮಾಡುವುದರಂದಿಗೆ ಯೋಧ ನಮನ ಕಾರ್ಯಕ್ರಮವನ್ನು ಆಚರಿಸಿದರು . ಈ ಕಾರ್ಯಕ್ರಮದಲ್ಲಿ ರಾಷ್ಟೀಯ ಕಾರ್ಯಕಾರಿಣಿ ಸದಸ್ಯೆ ದೀಪ್ತಿ , ನಗರ ಸಂಘಟನಾ ಕಾರ್ಯದರ್ಶಿ ಅಜಯ್ ಪ್ರಭು , ತಾಲೂಕ್ ಸಂಚಾಲಕ್ ನಿಶಾನ್ ಆಳ್ವ , ನಗರ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ , ವಿದ್ಯಾರ್ಥಿನಿ ಪ್ರಮುಖ್ ಶ್ರೀಲಕ್ಷ್ಮಿ ಕೆ.ಪಿ.ಟಿ ಹಾಸ್ಟೆಲ್ ಪ್ರಮುಖ್ ವರುಣ್ , ಪ್ರಮುಖರಾದ ಆತ್ಮಿಕ , ಆದಶ್ರ್, ಆದಿತ್ಯ ಶೆಟ್ಟಿ , ವರುಣ್ , ಕೀರ್ತನ್, ಶ್ರೀಪಾದ್, ಸುಶಾಂತ್, ರೂಪೇಶ್, ಶ್ರೀವಾಣಿ , ನಮ್ರತ , ಶ್ರೀನಿಧಿ ಭಟ್ ಉಪಸ್ಥಿತರಿದ್ದರು .


Spread the love