ಎರಡನೇ ಹಂತದ ಗ್ರಾಪಂ. ಚುನಾವಣೆ: ಉಡುಪಿ ಜಿಲ್ಲೆಯಲ್ಲಿ ಮತದಾನ ಆರಂಭ

Spread the love

ಎರಡನೇ ಹಂತದ ಗ್ರಾಪಂ. ಚುನಾವಣೆ: ಉಡುಪಿ ಜಿಲ್ಲೆಯಲ್ಲಿ ಮತದಾನ ಆರಂಭ

ಉಡುಪಿ: ಉಡುಪಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಭಾನುವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದೆ.

ಭಾನುವಾರ ಕಾಪು, ಕುಂದಾಪುರ, ಕಾರ್ಕಳದಲ್ಲಿ ಭಾನುವಾರ ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯ 65 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆಯಾಗಿದೆ.

ಒಟ್ಟು 87 ಪಂಚಾಯತ್ ಗಳ, 1178 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು. ಉಡುಪಿ ಜಿಲ್ಲೆಯಲ್ಲಿ 606 ಮತಗಟ್ಟೆಗಳಿದ್ದು, 4,16,550 ಮತದಾರರು ಮತದಾನ ಮಾಡುತ್ತಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಬೆಳ್ಳಾಲ ಮೂಡುಮುಂದ ವಾರ್ಡ್ ನಲ್ಲಿ ತಮ್ಮ ಮತ ಚಲಾಯಿಸಿದರು. ಬೆಳ್ಳಂಬೆಳಗ್ಗೆ ಬಂದು ಶಾಸಕ ಸುಕುಮಾರ ಶೆಟ್ಟಿ ಮತಗಟ್ಟಯಲ್ಲಿ ಮೊದಲ ಮತದಾನ ಮಾಡಿದರು.


Spread the love