
ಎಲ್ಲಾ ವರ್ಗಗಳ ಬೆಳವಣಿಗೆಗೆ ಪೂರಕವಾದ, ಜನಪರ ಬಜೆಟ್ – ನಯನಾ ಗಣೇಶ್
ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮ್ ಮಂಡಿಸಿರುವ ಕೇಂದ್ರ ಸರ್ಕಾರದ ಈ ಸಾಲಿನ ಬಜೆಟ್ ಎಲ್ಲಾ ವರ್ಗಗಳ ಬೆಳವಣಿಗೆಗೆ ಪೂರಕವಾದ,ಜನಪರ ಬಜೆಟ್ ವಾಗಿದೆಯೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಸ್ವಾಗತಿಸಿದ್ದಾರೆ.
ಆದಾಯ ತೆರಿಗೆ ಮಿತಿ 7 ಲಕ್ಷಕ್ಕೆ ಏರಿಕೆ,ವಿದ್ಯಾರ್ಥಿಗಳು ಮತ್ತು ಯುವ ಜನರಿಗೆ ಡಿಜಿಟಲ್ ಗ್ರಂಥಾಲಯ ,157 ಹೊಸ ನರ್ಸಿಂಗ್ ಕಾಲೇಜ್ ಸ್ಥಾಪನೆ,ದೇಶದಲ್ಲಿ 50 ಹೊಸ ವಿಮಾನ ನಿಲ್ದಾಣ ನಿರ್ಮಾಣ,ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆಗೆ 2 ಲಕ್ಷ ಕೋಟಿ ಬಿಡುಗಡೆ ಮಾಡಿದ್ದು,2023 ರವರೆಗೆ ಉಚಿತ ಆಹಾರ ಧಾನ್ಯಗಳನ್ನು ಮುಂದುವರಿಸಿದ್ದು ದೇಶದ ಬಡ ವರ್ಗದ ಜನರಿಗೆ ಅನುಕೂಲಕರವಾಗಿದೆ.
ಮೀನುಗಾರಿಕೆಗೆ 6000 ಕೋಟಿ ಮೀಸಲು,ಕರಾವಳಿ ಪ್ರದೇಶದಲ್ಲಿ ಮ್ಯಾಂಗ್ರೋವ್ ಕಾಡು ಬೆಳೆಸುವ ಮೂಲಕ ಪರಿಸರಕ್ಕೆ ಉತ್ತೇಜನ,ಒಂದು ಜಿಲ್ಲೆ-ಒಂದು ಉತ್ಪನಕ್ಕೆ ಪ್ರೋತ್ಸಾಹ,ಭದ್ರಾ ಮೇಲ್ದಂಡೆ ಗೆ 5300 ಕೋಟಿ ನೆರವು,ಈ ಮೂಲಕ ವಿತ್ತ ಸಚಿವೆ ನಿರ್ಮಲ ಸೀತಾರಾಮ್ ಮಂಡಿಸಿರುವ ಬಜೆಟ್ ದೇಶದ ಅಭಿವೃದ್ಧಿ ದೃಷ್ಟಿಯಿಂದ ಹೊಸ ದಿಕ್ಕಿನತ್ತ ಸಾಗಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಯವರ ಏಕ್ ಭಾರತ್, ಶ್ರೇಷ್ಠ ಭಾರತ್ ಸಾಕಾರಗೊಳ್ಳಲಿದೆಯೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಪತ್ರಿಕಾ ಹೇಳಿಕೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ