ಎಲ್ ಐ ಸಿ ವತಿಯಿಂದ ಮೌಂಟ್ ರೋಜರಿ ಆಸ್ಪತ್ರೆ ,ಅಲಂಗಾರ್ ಗೆ ಅ್ಯಂಬುಲೆನ್ಸ್ ಹಸ್ತಾಂತರ

Spread the love

ಎಲ್ ಐ ಸಿ ವತಿಯಿಂದ ಮೌಂಟ್ ರೋಜರಿ ಆಸ್ಪತ್ರೆ ,ಅಲಂಗಾರ್ ಗೆ ಅ್ಯಂಬುಲೆನ್ಸ್ ಹಸ್ತಾಂತರ

ಮೂಡಬಿದ್ರೆ: ಎಲ್ ಐ ಸಿ ಗೋಲ್ಡನ್ ಜುಬಿಲಿ ಫೌಂಡೇಶನ್, ಮುಂಬಯಿ ಇವರಿಂದ ಮೌಂಟ್ ರೋಜರಿ ಆಸ್ಪತ್ರೆ ,ಅಲಂಗಾರ್ ಇಲ್ಲಿ ಹೊಸ ಮೆಡಿಕಲ್ ಆ್ಯಂಬುಲೆನ್ಸ್ ಹಸ್ತಾಂತರ ಕಾರ್ಯಕ್ರಮವು ಮೌಂಟ್ ರೋಜರಿ ಆಸ್ಪತ್ರೆ ಆವರಣದಲ್ಲಿ ಜರಗಿತು.

ಮೌಂಟ್ ರೋಜರಿ ಸಿಸ್ಟರ್ಸ್ನವರು ಪ್ರಾರ್ಥನಾ ಗೀತೆಯ ಮೂಲಕ ಕಾರ್ಯಕ್ರಮ ಆರಂಭಿಸಿದರು. ಸಿಸ್ಟರ್ ಪ್ರೆಸಿಲ್ಲಾ ಡಿ’ಮೆಲ್ಲೊ, ಮೌಂಟ್ ರೋಜರಿ ಆಸ್ಪತ್ರೆಯ ನಿರ್ದೇಶಕರು ಎಲ್ಲಾ ಗಣ್ಯರನ್ನು ಸ್ವಾಗತಿಸುವಾಗ, ಈ ಆ್ಯಂಬುಲೆನ್ಸ್ ನೀಡಿದ ಎಲ್ ಐ ಸಿ ಗೋಲ್ಡನ್ ಜುಬಿಲಿ ಫೌಂಡೇಶನ್, ಮತ್ತು ಎಲ್ ಐ ಸಿ ಉಡುಪಿ ಡಿವಿಜನ್ ಸಂಸ್ಥೆಯ ಎಲ್ಲಾ ಆಫೀಸರ್ಸ್ರವರಿಗೆ ಉಪಕಾರ ಸ್ಮರಿಸಿದರು.

ಈವಾಗ ಈ ಆ್ಯಂಬುಲೆನ್ಸ್ ಬಂದ ನಂತರ ಆಸ್ಪತ್ರೆಯ ವೆಚ್ಚದಿಂದ ಹೊಸ ವೆಂಟಿಲೇಟರ್ ಹಾಗೂ ಮೋನಿಟರ್, ಅಳವಡಿಸಿ ಇದು ಮೂಡಬಿದ್ರೆಯಲ್ಲಿ ವೆಂಟಿಲೇಟರ್ ಇರುವ ಪ್ರಥಮ ಆ್ಯಂಬುಲೆನ್ಸ್ ಎಂದು ಶ್ಲಾಘಿಸಿದರು.

ಬಿಂದು ರಾಬರ್ಟ್, ಸೀನಿಯರ್ ಡಿವಿಜನಲ್ ಮ್ಯಾನೇಜರ್, ಉಡುಪಿ ಡಿವಿಜನ್,ಇವರು ಆ್ಯಂಬುಲೆನ್ಸ್ ಮೌಂಟ್ ರೊಜರಿ ಆಸ್ಪತ್ರೆಯ ನಿರ್ದೆಶಕರಿಗೆ ಹಸ್ತಾಂತರಿಸಿ ಈ ವರ್ಷ ಎಲ್ ಐ ಸಿ ಯ ಪ್ರಥಮ ಕಾರ್ಯಕ್ರಮ ಇದಾಗಿದೆ, ಇದು ಒಂದು ಸಂತೋಷದ ಕಾರ್ಯಕ್ರಮ ಎಲ್ ಐ ಸಿ ಯ ಉದ್ದೇಶಜನರಿಗಾಗಿ, ಜನರ ಒಳಿತಿಗಾಗಿ, ಕಾರ್ಯಕ್ರಮ, ಚಟುವಟಿಕೆಗಳನ್ನು ನಿರೂಪಿಸುವುದು. ಈವಾಗ ಎಲ್ ಐ ಸಿ ಕ್ಯಾನ್ಸರ್ ಪಾಲಿಸಿ ಎಂಬ ಹೊಸ ಯೋಜನೆಯ ಉಪಯೋಗಗಳನ್ನು ವಿವರಿಸಿದರು. ಎಲ್ಲರಿಗೂ ಒಳಿತನ್ನು ಹಾರೈಸಿದರು.

ಮೊನ್ಸಿಂಜೊರ್ ಎಡ್ವಿನ್ ಸಿ ಪಿಂಟೊ, ಮೌಂಟ್ ರೋಜರಿ ಸಂಸ್ಥೆಯ ನಿರ್ದೇಶಕರು, ಆಸ್ಪತ್ರೆಯ ನಿರ್ಮಾಪಕರು, ಈ ಆಸ್ಪತ್ರೆಯ ಸಿಸ್ಟರ್ಸ್ನವರ ಮೂಲಕ ಎಲ್ಲಾ ರೋಗಿಗಳಿಗೆ ಸಹಾನೂಭೂತಿಯ ಸೇವೆ ಲಭಿಸಬೇಕು, ಬಡಜನರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಸಿಗಬೇಕು, ಈ ಆಸ್ಪತ್ರೆ ಬೆಳೆಯಬೇಕು ಎಂದು ಐIಅ ಸಂಸ್ಥೆಯ ಉಪಕಾರ ಸ್ಮರಿಸಿ ಆಶೀರ್ವದಿಸಿದರು.

ಸದಾನಂದ ಕಾಮತ್, ಮ್ಯಾನೇಜರ್ ಸೇಲ್ಸ್,  ಡಿವಿಜನಲ್ ಆಫೀಸ್, ಉಡುಪಿ ಎಲ್ ಐ ಸಿ ಯ ಉದ್ದೇಶ, ಜನರ ಹಣದಿಂದ, ಜನರಿಗೆ ಒಳ್ಳೆಯ ಮಾನವೀಯ ಕಾರ್ಯಗಳು ಆಗುತ್ತಾ ಇವೆ. ಇವುಗಳನ್ನು ಡುವುದು ನಮ್ಮ ಕರ್ತವ್ಯ ಮತ್ತು ಉದ್ದೇಶ ಎಂದರು.

ಪಿ.ಕೆ. ಥೋಮಸ್, ಚಂದ್ರಶೇಖರ್, ಮ್ಯಾನೇಜರ್ ಎಮ್.ಸಿ.ಎಸ್. ಬ್ಯಾಂಕ್ ಮೂಡಬಿದ್ರೆ, ಮೋಹನ್ದಾಸ್, ಮ್ಯಾನೇಜರ್ ಹೆಲ್ತ್ ಇನ್ಸುರೆನ್ಸ್, ರಮೇಶ್ ಭಟ್, ಮ್ಯಾನೇಜರ್ ಎಲ್ಐಸಿ ಆಫಿಸ್ ಕಾರ್ಕಳ, ಪ್ರಕಾಶ್ ಕೆ. ಎಲ್ಐಸಿ ಸೆಟಲೈಟ್ ಆಫಿಸ್, ಮೂಡಬಿದ್ರೆ ಡಾ!ಕೇಶವ್ಚಂದ್ರ ತೇಜಸ್ವಿ, ಫಿಜಿಶಿಯನ್, ಮೌಂಟ್ ರೋಜರಿ ಆಸ್ಪತ್ರೆ, ಜೋರ್ಜ್ ಮೋನಿಸ್, ಡಾ!ಶ್ರೀಲತಾ ಪೈ, ಡಾ!ವಿನಯ್ ಪ್ರಸಾದ್, ಡಾ!ಮಾರ್ಕ್ ಬುತೆಲ್ಲೊ ಇವರು ಉಪಸ್ಥಿತರಿದ್ದರು. ಪ್ರಿನ್ಸಿ ಪಿಂಟೊ, ಶಿರ್ತಾಡಿ, ಧನ್ಯವಾದಗೈದರು. ಅರುಣ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.


Spread the love