ಎಸಿಬಿ ದಾಳಿ: ಉಡುಪಿಯ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಮನೆಯಲ್ಲಿ ಅಪಾರ ಚಿನ್ನಾಭರಣ ಪತ್ತೆ!

Spread the love

ಎಸಿಬಿ ದಾಳಿ: ಉಡುಪಿಯ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಮನೆಯಲ್ಲಿ ಅಪಾರ ಚಿನ್ನಾಭರಣ ಪತ್ತೆ!

ಉಡುಪಿ: ರಾಜ್ಯದ ವಿವಿಧ ಕಡೆಗಳಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ನಡೆದಿದ್ದು, ಅದರಂತೆ ಉಡುಪಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮನೆಗೂ ಎಸಿಬಿ ದಾಳಿ ನಡೆಸಿದೆ. ಈ ವೇಳೆ ಅಪಾರ ಪ್ರಮಾಣದ ಚಿನ್ನಾಭರಣಗಳು ಮತ್ತು ನಗದು ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಅಧಿಕಾರಿಗಳ ಪರಿಶೀಲನೆ ಸಮಯದಲ್ಲಿ ಎರಡು ಕೆಜಿಗೂ ಅಧಿಕ ಚಿನ್ನಾಭರಣ, ಸುಮಾರು 5 ಲಕ್ಷ ರೂಪಾಯಿ ನಗದು, ದುಬಾರಿ ಬೆಲೆಯ ವಾಚು, ಮೂರು ವಾಹನ, ಚಿನ್ನದ ತಟ್ಟೆ, ಚಿನ್ನದ ತಗಡು ಅಲ್ಲದೆ 15 ಕ್ಕೂ ಹೆಚ್ಚು ಚಿನ್ನದ ಬಳೆ, 30 ಕ್ಕೂ ಹೆಚ್ಚು ಸರ, ನೆಕ್ಲೆಸ್‌, ಬ್ರಾಸ್ಲೆಟ್‌, ಚಿನ್ನದ ಒಡವೆಗಳು, ಉಂಗುರ ದೇವರ ಮೂರ್ತಿಗಳು ಪತ್ತೆಯಾಗಿವೆ. ಅಲ್ಲದೆ ಆಸ್ತಿ ಪತ್ರ ದಾಖಲೆಗಳನ್ನು ಕೂಡ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.


Spread the love