
ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ಪ್ರಕಟ; ವೇಳಾಪಟ್ಟಿ ಹೀಗಿದೆ
ಬೆಂಗಳೂರು: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ದೀರ್ಘ ಸಮಯದಿಂದ ಕಾಯುತ್ತಿದ್ದ ಅಗ್ನಿ ಪರೀಕ್ಷೆ ಇನ್ನೇನು ಬಂದೇ ಬಿಟ್ಟಿದೆ. ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಕಾತರದಿಂದ ಕಾಯುತ್ತಿರುವ ಪರೀಕ್ಷೆಯ ವೇಳಾಪಟ್ಟಿಯನ್ನು ಎಸ್.ಎಸ್.ಎಲ್.ಸಿ ಬೋರ್ಡ್ ಬಿಡುಗಡೆ ಮಾಡಿದೆ.
ಪರೀಕ್ಷೆ ದಿನಾಂಕ ಪ್ರಕಟ ಮಾಡಿರುವ ಎಸ್.ಎಸ್.ಎಲ್.ಸಿ ಬೋರ್ಡ್, ಮಾರ್ಚ್ 31 ರಿಂದ ಏಪ್ರಿಲ್ 15 ರ ವರೆಗೂ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರ ವರೆಗೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ಈ ಸಂಬಂಧ ಪರೀಕ್ಷಾ ಮಂಡಳಿ ಸುತ್ತೋಲೆ ಬಿಡುಗಡೆ ಮಾಡಿದೆ. ಈ ಸುತ್ತೋಲೆಯಲ್ಲಿ ‘ಏಪ್ರಿಲ್-2023ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯನ್ನು ದಿನಾಂಕ: 31.03.2023 ರಿಂದ 15,04,2023 ರವರೆಗೆ ನಡೆಸಲು ತೀರ್ಮಾನಿಸಿ, ಅಂತಿಮ ವೇಳಾಪಟ್ಟಿಯನ್ನು ಮಂಡಳಿಯ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ. ಸದರಿ ವೇಳಾಪಟ್ಟಿಯನ್ನು ಈ ಪತ್ರಕ್ಕೆ ಲಗತ್ತಿಸಲಾಗಿದ್ದು, ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನರಹಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಶಾಲೆಯ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರಕಟಿಸಿ, ವಿದ್ಯಾರ್ಥಿಗಳಿಗೆ ಖುದ್ದಾಗಿ ಗಮನಿಸಲು ಸೂಚಿಸುವುದು’ ಎಂದು ಬರೆಯಲಾಗಿದೆ.
ಸದ್ಯ ಪ್ರಕಟಿಸಿರುವ ವೇಳಾಪಟ್ಟಿ ಹೀಗಿದೆ:
ಮಾರ್ಚ್ 31 – ಪ್ರಥಮ ಭಾಷೆ
ಏಪ್ರಿಲ್ 4 – ಗಣಿತ/ಸಮಾಜಶಾಸ್ತ್ರ
ಏಪ್ರಿಲ್ 6 – ದ್ವಿತೀಯ ಭಾಷೆ
ಏಪ್ರಿಲ್ 8 – ಅರ್ಥಶಾಸ್ತ್ರ,
ಏಪ್ರಿಲ್ 10 – ಪೊಲಿಟಿಕಲ್ ಸೈನ್ಸ್/ವಿಜ್ಞಾನ
ಏಪ್ರಿಲ್ 12 – ತೃತೀಯ ಭಾಷೆ ಹಿಂದಿ
ಏಪ್ರಿಲ್ 15 – ಸಮಾಜ ವಿಜ್ಞಾನ