ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ: ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ಶ್ರೀಲಹರಿ ಗೆ ವೈದ್ಯೆಯಾಗುವ ಕನಸು

Spread the love

ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ: ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ಶ್ರೀಲಹರಿ ಗೆ ವೈದ್ಯೆಯಾಗುವ ಕನಸು

ಕುಂದಾಪುರ: ಸೋಮವಾರ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿನ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೀ ಲಹರಿ ಎಸ್ ದೇವಾಡಿಗ 625 ರಲ್ಲಿ 624 ಅಂಕಗಳಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೀ ಲಹರಿ ಅವರು ಹೆಮ್ಮಾಡಿ ಜಾಲಾಡಿಯ ನಿವಾಸಿ ಶ್ರೀಧರ ದೇವಾಡಿಗ ಹಾಗೂ ಲಲಿತಾ ಎಸ್ ದೇವಾಡಿಗ ಅವರ ಕಿರಿಯ ಪುತ್ರಿ, ತಂದೆ ಶ್ರೀಧರ ದೇವಾಡಿಗ ವಾದ್ಯ ತಂಡ ನಿರ್ವಹಿಸುತ್ತಿದ್ದರೆ, ತಾಯಿ ಲಲಿತಾ ಎಸ್ ದೇವಾಡಿಗ ಅವರು ನಗರ ಯೋಜನಾ ಪ್ರಾಧಿಕಾರದಲ್ಲಿ ಬೆರಳಚ್ಚು ತಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಪಡೆದ ಅಂಕಗಳು:
ಶ್ರೀಲಹರಿ ಸಂಸ್ಕೃತದಲ್ಲಿ 125, ಕನ್ನಡ 100, ಇಂಗ್ಲೀಷ್ 100, ವಿಜ್ಞಾನ 100, ಸಮಾಜ 100, ಗಣಿತದಲ್ಲಿ 99 ಅಂಕ ಪಡೆದಿದ್ದಾರೆ.

ವಿದ್ಯಾರ್ಥಿನಿ ಶ್ರೀಲಹರಿ ಆಯಾ ದಿನಗಳ ಪಾಠವನ್ನು ಆಯಾ ದಿನದಲ್ಲೇ ಓದಿ ಮುಗಿಸುತ್ತಿದ್ದು, ಯಾವುದೇ ಟ್ಯೂಶನ್ ತರಗತಿಗಳಿಗೆ ಹೋಗಿಲ್ಲ. ಪರೀಕ್ಷಾ ದಿನಗಳಲ್ಲಿ ಹೆಚ್ಚು ಓದುತ್ತಿದ್ದು, ತನ್ನ ಈ ಸಾಧನೆಗೆ ಅದುವೇ ಭದ್ರಭುನಾದಿ ಎಂದು ತಿಳಿಸಿದ್ದಾರೆ.

ವೈದ್ಯೆಯಾಗುವ ಬಯಕೆ:
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ವಿದ್ಯಾರ್ಥಿನಿ ಶ್ರೀಲಹರಿಗೆ ವೈದ್ಯೆಯಾಗುವ ಕನಸಿದೆ. ಈ ಕನಸಿನ ನನಸಿಗಾಗಿಯೇ ಪಿಯುಸಿಯಲ್ಲಿ ವಿಜ್ಙಾನ ವಿಭಾಗ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. 620 ಕ್ಕಿಂತ ಅಧಿಕ ಅಂಕದ ನಿರೀಕ್ಷೆ ಇತ್ತು. ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿರುವುದು ಖುಷಿ ತಂದಿದೆ. ನನ್ನ ಈ ಸಾಧನೆಗೆ ನನ್ನ ಶಿಕ್ಷಕರು, ತಂದೆ-ತಾಯಿ ಕಾರಣ ಎಂದು ಶ್ರೀ ಲಹರಿ ಹೇಳೀದ್ದಾರೆ.

ಮಗಳ ಸಾಧನೆಯಿಂದ ಬಹಳ ಸಂತಸವಾಗಿದೆ. ಅವಳ ಪರಿಶ್ರಮವೇ ಈ ಸಾಧನೆಗೆ ಕಾರಣ. ಯಾವುದೇ ಟ್ಯೂಶನ್ ಗೆ ಹೋಗದೆ ಅಂದಿನ ಪಾಠ ಅಂದಿನ ದಿನವೇ ಶ್ರದ್ಧೆಯಿಂದ ಓದುತ್ತಿದ್ದಳು ಎಂದು ತಾಯಿ ಲಲಿತಾ ಎಸ್ ದೇವಾಡಿಗ ಸಂತಸ ವ್ಯಕ್ತಪಡಿಸಿದ್ದಾರೆ


Spread the love

Leave a Reply

Please enter your comment!
Please enter your name here