ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್

Spread the love

ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್

ಹಾಸನ: ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ವತಿಯಿಂದ ಉಚಿತವಾಗಿ ಹತ್ತು ಸಾವಿರ ಸರ್ಜಿಕಲ್ ಮಾಸ್ಕ್ ಗಳನ್ನು ವಿತರಿಸುತ್ತಿದ್ದು, ಡಿಡಿಪಿಐ ಪ್ರಕಾಶ್‍ ಅವರಿಗೆ ಹಸ್ತಾಂತರಿಸಲಾಯಿತು.

ಈ ವೇಳೆ ಡಿ.ಡಿ.ಪಿ.ಐ ಪ್ರಕಾಶ್‍ ರವರು ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯವರು ಮಾಸ್ಕ್‍ಗಳನ್ನು ನೀಡುತ್ತಿರುವುದರಿಂದ ಕೊರೊನಾ ವೈರಸ್ ಸೋಂಕು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಹರಡುವುದನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರನ್ನು ಸಂಪರ್ಕಿಸಿ ಮಾಸ್ಕ್ ನೀಡುವ ಬಗ್ಗೆ ಮನವಿ ಮಾಡಿದ ಮೇರೆಗೆ ತತ್‍ ಕ್ಷಣ ಸಂಸ್ಥೆಯ ವತಿಯಿಂದ ಸ್ಪಂದಿಸಿ ಉಚಿತವಾಗಿ ನೀಡಿದ ಮಾಸ್ಕ್‍ಗಳನ್ನು ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಹೆಮ್ಮಿಗೆ ಮೋಹನ್‍ರವರು ಶಿಕ್ಷಣ ಇಲಾಖೆಯು ಇತ್ತೀಚಿನ ದಿನಗಳಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕಗಳನ್ನು ಪ್ರೌಡಶಾಲೆಗಳಲ್ಲಿ ಪ್ರಾರಂಭಿಸಲು ಆಸಕ್ತಿ ತೋರಿಸಿದ್ದು, ಮಕ್ಕಳಿಗೆ ಸಾಮಾಜಿಕ ಮೌಲ್ಯಗಳನ್ನು ತುಂಬುವ ಪ್ರಯತ್ನದಲ್ಲಿ ರೆಡ್ ಕ್ರಾಸ್ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪರೀಕ್ಷೆಗೆ ಭಾಗವಹಿಸುವ ಎಲ್ಲಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್‍ಮೂರ್ತಿ, ಇಓ ತಮ್ಮಣ್ಣಗೌಡ, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಉಪ-ಸಭಾಪತಿಗಳಾದ ಡಾ. ಗುರುರಾಜ್ ಹೆಬ್ಬಾರ್, ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ, ಖಜಾಂಜಿ ಜಯೇಂದ್ರ ಕುಮಾರ್, ನಿರ್ದೇಶಕರಾದ ಶಿವಣ್ಣ, ಡಾ. ವೈ.ಎಸ್. ವೀರಭದ್ರಪ್ಪ, ಶಬ್ಬೀರ್ ಅಹಮದ್, ಹೆಚ್.ಡಿ. ಕುಮಾರ್, ಮಂಜಪ್ಪಗೌಡ, ಡಾ. ಭಾರತಿ ರಾಜಶೇಖರ್, ಡಾ. ಸಾವಿತ್ರಿ, ನಿರ್ಮಲ, ಜಯಶ್ರೀ ಕೆ.ಟಿ, ಮಹಾವೀರ್ ಬನ್ಸಾಲಿ, ಉದಯ್ ಕುಮಾರ್, ಜಯಪ್ರಕಾಶ್, ಜಯರಾಮ್, ಚಂದನ್ ಹಾಗೂ ಹರ್ಷಿತ್ ಭಾಗವಹಿಸಿದ್ದರು.


Spread the love

1 Comment

  1. SSLC exam appearing students will get mask at zero cost. it is the grace of CM & PM only.

Comments are closed.