Home Mangalorean News Kannada News ಎಸ್‌.ಐ.ಆರ್ ಎಣಿಕೆ ಪ್ರಕ್ರಿಯೆಗೆ ಐವನ್ ಡಿ’ಸೋಜಾ ನಿವಾಸದಲ್ಲಿ ಚಾಲನೆ

ಎಸ್‌.ಐ.ಆರ್ ಎಣಿಕೆ ಪ್ರಕ್ರಿಯೆಗೆ ಐವನ್ ಡಿ’ಸೋಜಾ ನಿವಾಸದಲ್ಲಿ ಚಾಲನೆ

Spread the love

ಎಸ್‌.ಐ.ಆರ್ ಎಣಿಕೆ ಪ್ರಕ್ರಿಯೆಗೆ ಐವನ್ ಡಿ’ಸೋಜಾ ನಿವಾಸದಲ್ಲಿ ಚಾಲನೆ

ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ ಅವರ ಮಂಗಳೂರಿನ ನಿವಾಸದಲ್ಲಿ ಇಂದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅಂಗವಾಗಿ ಮನೆ-ಮನೆಗೆ ತೆರಳಿ ನಡೆಸಲಾಗುತ್ತಿರುವ ಎಣಿಕೆ (Enumeration) ಹಾಗೂ ನಮೂನೆ ಭರ್ತಿ (Enumeration Form Filling) ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಬೂತ್ ಮಟ್ಟದ ಅಧಿಕಾರಿ (BLO) ಅವರು  ಐವನ್ ಡಿ’ಸೋಜಾ ಹಾಗೂ ಅವರ ಕುಟುಂಬದ ಸದಸ್ಯರ ಎಣಿಕೆ ನಮೂನೆಗಳನ್ನು ಭರ್ತಿ ಮಾಡುವ ಮೂಲಕ ಎಸ್‌ಐಆರ್ ಎಣಿಕೆ ಪ್ರಕ್ರಿಯೆಯನ್ನು ಆರಂಭಿಸಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಮಟ್ಟದ ಅಧಿಕಾರಿ (Block Level Officer), ಬೂತ್ ಮಟ್ಟದ ಅಧಿಕಾರಿ (BLO), ಬೂತ್ ಮಟ್ಟದ ಏಜೆಂಟ್ (BLA) ಉಪಸ್ಥಿತರಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಮತದಾರರ ಸಹಕಾರ ಕೋರಿದರು.


Spread the love

Exit mobile version