ಎಸ್ ಡಿ ಪಿ ಐ ಸಾವರ್ಕರ್ ಫೋಟೋ ತೆರವುಗೊಳಿಸಿ ದೇಶದ್ರೋಹ ದ ಕೆಲಸ ಮಾಡಿದೆ – ನಯನಾ ಗಣೇಶ್

Spread the love

ಎಸ್ ಡಿ ಪಿ ಐ ಸಾವರ್ಕರ್ ಫೋಟೋ ತೆರವುಗೊಳಿಸಿ ದೇಶದ್ರೋಹ ದ ಕೆಲಸ ಮಾಡಿದೆ – ನಯನಾ ಗಣೇಶ್

ಉಡುಪಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ ದ ಸಂದರ್ಭ ದೇಶ ಭಕ್ತ ಸಾವರ್ಕರ್ ಗೆ ಅವಮಾನ ಮಾಡಿರುವ ಎಸ್ ಡಿ ಪಿ ಐ ಮತ್ತು ಮತೀಯ ಸಂಘಟನೆಯ ಕೃತ್ಯವನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್ ತೀವ್ರವಾಗಿ ಖಂಡಿಸಿದ್ದಾರೆ.

ಕಾಶ್ಮೀರ ದಿಂದ ಕನ್ಯಾ ಕುಮಾರಿ ವರೆಗೆ ದೇಶಕ್ಕೆ ದೇಶವೇ 3 ದಿನಗಳ ಘರ್ ಘರ್ ತಿರಂಗಾ ಮೂಲಕ ಮನೆ-ಮನಗಳನ್ನು ಮುಟ್ಟುವ ಕಾರ್ಯವಾಗಿದ್ದು,ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಅದ್ದೂರಿಯಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮಾಡಿದ್ದಾರೆ.ಆದರೆ ರಾಜ್ಯದಲ್ಲಿ ಕೆಲವು ಮತೀಯ ಶಕ್ತಿಗಳು ಮತ್ತು ಎಸ್ ಡಿ ಪಿ ಐ ಶಿವಮೊಗ್ಗ ದಲ್ಲಿ ಅಂಡಮಾನ್ ನಲ್ಲಿ ಕರಿ ನೀರಿನ ಶಿಕ್ಷೆ ಅನುಭವಿಸಿ,ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶ ಭಕ್ತ ಸಾವರ್ಕರ್ ಫೋಟೋ ತೆರವುಗೊಳಿಸುವ ಮೂಲಕ ದೇಶದ್ರೋಹ ದ ಕೆಲಸವನ್ನು ಮಾಡಿದೆ ಅಲ್ಲದೆ ಗುರುಪುರ ದಲ್ಲಿ ಶಿಕ್ಷಣ ಸಂಸ್ಥೆಯ ಮಕ್ಕಳ ನೃತ್ಯ ಕಾರ್ಯಕ್ರಮದಲ್ಲಿ ಪ್ರದರ್ಶನ ಕ್ಕೆ ಈ ಸಂಘಟನೆ ಅಡ್ಡಿ ಮಾಡಿದ್ದು ಖಂಡನೀಯ,ಪದೇ ಪದೇ ರಾಜ್ಯದಲ್ಲಿ ಎಸ್ ಡಿ ಪಿ ಐ ಮತ್ತು ಕೆಲ ಸಂಘಟನೆಗಳು ಅಶಾಂತಿಯ ಮತ್ತು ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದೆ,ರಾಜ್ಯ ಸರ್ಕಾರ ಈ ಘಟನೆ ಗಳ ಹಿಂದಿರುವ ಶಕ್ತಿಗಳನ್ನು ಮಟ್ಟಹಾಕಲಿದೆಯೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀ ಮತಿ ನಯನಾ ಗಣೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Spread the love