ಎ.ಶಿವಾನಂದ ಕರ್ಕೇರ ಸಂಸ್ಮರಣಾ ಪ್ರಶಸ್ತಿಗೆ ಶ್ರೀ ಆನಂದ ಬಂಗೇರ ಅರ್ಕುಳ ಆಯ್ಕೆ

Spread the love

ಎ.ಶಿವಾನಂದ ಕರ್ಕೇರ ಸಂಸ್ಮರಣಾ ಪ್ರಶಸ್ತಿಗೆ ಶ್ರೀ ಆನಂದ ಬಂಗೇರ ಅರ್ಕುಳ ಆಯ್ಕೆ

ಮಂಗಳೂರು: ತುಳುನಾಡಿನ ನಾಟಕಕಾರ, ಸಾಹಿತಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ದಿ| ಎ.ಶಿವಾನಂದ ಕರ್ಕೇರ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ದಿನಾಂಕ: 07-10-2022 ರಂದು ಬೆಳಿಗ್ಗೆ 10ರಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಿರಿಚಾವಡಿಯಲ್ಲಿ ಆಯೋಜಿಸಲಾಗಿದೆ.

ಬೆಳಿಗ್ಗೆ 10 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 11 ಕ್ಕೆ ಸರಿಯಾಗಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮವನ್ನು ದಿ| ಶಿವಾನಂದ ಕರ್ಕೇರ ರವರ ಧರ್ಮಪತ್ನಿ ಪ್ರಪುಲ್ಲ ಶಿವಾನಂದ ಕರ್ಕೇರ ಅವರು ಉದ್ಘಾಟಿಸಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ವಿ.ಜಿ ಪಾಲ್ ರವರು ಸಂಸ್ಮರಣಾ ನುಡಿಯನ್ನು ನುಡಿಯಲಿದ್ದಾರೆ. ಎ.ಶಿವಾನಂದ ಕರ್ಕೇರ ಸಂಸ್ಮರಣಾ ಪ್ರಶಸ್ತಿಯನ್ನು ಜನಪದ ಸಿರಿ ಸಿಂಗಾರದ ಕಲಾವಿದ ಆನಂದ ಬಂಗೇರ ಅರ್ಕುಳ ರವರಿಗೆ ನೀಡಿ ಗೌರವಿಸಲಾಗುವುದು.

ಮಹಾನಗರ ಪಾಲಿಕೆಯ ನೂತನ ಮೇಯರ್ ಜಯಾನಂದ ಅಂಚನ್ ಮತ್ತು ಮುಜರಾಯಿ ದತ್ತಿ ಇಲಾಖೆಯ ಸಹಾಯಕ ಕಮಿಷನರ್ ಶ್ರೀ ಗುರುಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಾಲ ಪ್ರತಿಭೆಗಳಿಗೆ ವಿಶೇಷ ಗೌರವಾರ್ಪಣೆ ನಡೆಯಲಿದೆ ಎಂದು ಕಾರ್ಯಕ್ರಮದ ಸದಸ್ಯ ಸಂಚಾಲನ ನರೇಂದ್ರ ಕೆರೆಕಾಡು ಹಾಗೂ ರಿಜಿಸ್ಟ್ರಾರ್ ಕವಿತಾ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Spread the love