
ಏರೋ ಎಕ್ಸ್‌ಪೋ 2023: ಕರ್ನಾಟಕದ MRPLನೊಂದಿಗೆ ಭಾರತೀಯ ವಾಯುಪಡೆಯ ಒಪ್ಪಂದ
ಕರಾವಳಿ ಕರ್ನಾಟಕ ಮೂಲದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಮತ್ತು ಭಾರತೀಯ ವಾಯುಪಡೆಯ ನಡುವೆ ರಾಷ್ಟ್ರದ ಸಶಸ್ತ್ರ ಸೇವೆಗಳಿಗೆ ಜೈವಿಕ ವಿಮಾನ ಇಂಧನವನ್ನು (ಬಯೋ-ಎಟಿಎಫ್) ಪೂರೈಸಲು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಏರೋ ಎಕ್ಸ್‌ಪೋ 2023 ರ ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಉನ್ನತ ಅಧಿಕಾರಿಗಳು ಮತ್ತು ಎಂಡಿ ಎಂಆರ್‌ಪಿಎಲ್ ಶ್ರೀ ಎಂ. ವೆಂಕಟೇಶ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಇದರೊಂದಿಗೆ MRPL ಭಾರತೀಯ ವಾಯುಪಡೆಗೆ ಬಯೋ-ಎಟಿಎಫ್ ಒದಗಿಸಲು MoUಗೆ ಸಹಿ ಮಾಡಿದ ಮೊದಲ ಭಾರತೀಯ ಹೈಡ್ರೋಕಾರ್ಬನ್ ರಿಫೈನರಿಯಾಗಿದೆ.
ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ವಾಯುಪಡೆಯ ಮುಖ್ಯಸ್ಥರು, ಸೇನಾ ಮುಖ್ಯಸ್ಥರು ಮತ್ತು ಇತರ ಹಿರಿಯ ಭಾರತೀಯ ವಾಯುಪಡೆ ಅಧಿಕಾರಿಗಳು ಭಾಗವಹಿಸಿದ ಸಮಾರಂಭದಲ್ಲಿ, ಒಪ್ಪಂದ ದಾಖಲೆಗಳನ್ನು,MRPLನ ಎಂ.ಡಿ. ಎಂ. ವೆಂಕಟೇಶ್ ಮತ್ತು ಏರ್ ವೈಸ್ ಮಾರ್ಷಲ್, ಎಸ್.ಕೆ. ಜೈನ್ ಅವರು ವಿನಿಮಯ ಮಾಡಿಕೊಂಡರು. ಸುನಿಲ್ ಕುಮಾರ್, ಜಂಟಿ ಕಾರ್ಯದರ್ಶಿ-ಪರಿಶೋಧನೆ ಮತ್ತು ಬಯೋ-ಎಟಿಎಫ್ ರಿಫೈನರಿ, MoPNGಸಹ ಉಪಸ್ಥಿತರಿದ್ದರು.
MRPL ಮೂಲಗಳ ಪ್ರಕಾರ “ರಾಷ್ಟ್ರದ ಸಶಸ್ತ್ರ ಪಡೆಗಳಿಗೆ ಪರಿಸರಸ್ನೇಹಿ ಇಂಧನ ಅಗತ್ಯಗಳನ್ನು ಪೂರೈಸುವ ಮೊದಲ ಭಾರತೀಯ ಸಂಸ್ಕರಣಾಗಾರವಾಗಿರುವುದು MRPLಗೆ ಹೆಮ್ಮೆಯ ಕ್ಷಣವಾಗಿದೆ. ಈ ಒಪ್ಪಂದವು ಪರಿಸರ ಸಂರಕ್ಷಣೆಯತ್ತ ರಾಷ್ಟ್ರದ ದೂರಗಾಮಿ ಬದ್ದತ್ತೆಗಳ ಅನುಷ್ಟಾನಕ್ಕೆ ಸಹಾಯಕಾರಿಯಾಗಲಿದೆ.