ಏ. 10-20 ರ ವರೆಗೆ ಉಡುಪಿ ಸೇರಿದಂತೆ 8 ನಗರಗಳಲ್ಲಿ ರಾತ್ರಿ ‘ಕೊರೋನಾ ಕರ್ಪ್ಯೂ’ ಜಾರಿ – ಯಡಿಯೂರಪ್ಪ

Spread the love

ಏ. 10-20 ರ ವರೆಗೆ ಉಡುಪಿ ಸೇರಿದಂತೆ 8 ನಗರಗಳಲ್ಲಿ ರಾತ್ರಿ ‘ಕೊರೋನಾ ಕರ್ಪ್ಯೂ’ ಜಾರಿ – ಯಡಿಯೂರಪ್ಪ

ಬೆಂಗಳೂರು: ರಾಜ್ಯದ ಉಡುಪಿ ಜಿಲ್ಲೆ ಸೇರಿದಂತೆ 8 ಜಿಲ್ಲಾ ಕೇಂದ್ರಗಳಲ್ಲಿ ಏಪ್ರಿಲ್ 10ರಿಂದ 20ರವರೆಗೆ ಕೊರೋನಾ ಕರ್ಪ್ಯೂ ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಪ್ರಧಾನಿ ಮೋದಿಯವರೊಂದಿಗೆ ಸಭೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಏಪ್ರಿಲ್ 10 ರಿಂದ 20 ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಬೆಂಗಳೂರು ನಗರ, ಮೈಸೂರು ನಗರ, ಮಂಗಳೂರು, ಕಲಬುರ್ಗಿ,-ಬೀದರ್, ತುಮಕೂರು, ಉಡುಪಿ, ಮಣಿಪಾಲದಲ್ಲಿ ನೈಟ್ ಕೊರೋನಾ ಕರ್ಫ್ಯೂ ಜಾರಿಯಲ್ಲಿರುತ್ತದೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಮತ್ತೆ ಕಠಿಣ ನಿಯಮ ಜಾರಿಗೊಳಿಸಲಾಗಿದೆ.

ರಾತ್ರಿ ವೇಳೆ ಜನರ ಓಡಾಟಕ್ಕೆ ನಿರ್ಬಂಧ ಇರುತ್ತದೆ. ಮದುವೆ ಸಮಾರಂಭಗಳಿಗೆ ಇತಿ ಮಿತಿ ಇರಬೇಕು. ಜನರು ಹೊರಗೆ ಓಡಾಡುವಂತಿಲ್ಲ.10 ಗಂಟೆಯ ಒಳಗೆ ವ್ಯಾಪಾರ-ವಹಿವಾಟು ಬಂದ್ ಮಾಡಬೇಕು ಎಂದು ಹೇಳಲಾಗಿದೆ.


Spread the love

Leave a Reply

Please enter your comment!
Please enter your name here