ಏ. 4 ರಂದು ಎಸ್‌ ಸಿ ಡಿಸಿಸಿ ಬ್ಯಾಂಕ್‌ ನ 110 ನೇ ಉಪ್ಪುಂದ ಶಾಖೆ ಉದ್ಘಾಟನೆ

Spread the love

ಏ. 4 ರಂದು ಎಸ್‌ ಸಿ ಡಿಸಿಸಿ ಬ್ಯಾಂಕ್‌ ನ 110 ನೇ ಉಪ್ಪುಂದ ಶಾಖೆ ಉದ್ಘಾಟನೆ

ಮಂಗಳೂರು: ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ (ಎಸ್.ಸಿ.ಡಿ.ಸಿ.ಸಿ) 110ನೇ ನೂತನ ಉಪ್ಪುಂದ ಶಾಖೆಯ ಉದ್ಘಾಟನೆ ಹಾಗೂ ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶ ಏಪ್ರಿಲ್‌ 4ರಂದು ಬೆಳಿಗ್ಗೆ 10.30 ಗಂಟೆಗೆ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ನಡೆಯಲಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಉತ್ಕೃಷ್ಠ ಬ್ಯಾಂಕಿಂಗ್‌ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಉಪ್ಪುಂದ ಗ್ರಾಮದ ಉಪ್ಪುಂದ ಶಿವದುರ್ಗಾ ಕಾಂಪ್ಲೆಕ್ಸ್‌ ಕಟ್ಟಡದ ನೆಲ ಅಂತಸ್ತಿನಲ್ಲಿ ಕಾರ್ಯಾರಂಭಗೊಳ್ಳಲಿದೆ. ಈ ನೂತನ ಶಾಖೆಯ ಸಂಪೂರ್ಣ ಗಣಕೀಕೃತಗೊಂಡು, ಕೋರ್‌ ಬ್ಯಾಂಕಿಂಗ್‌ ಹಾಗೂ ಏಕಗವಾಕ್ಷಿ ಸೌಲಭ್ಯದ ಜೊತೆಗೆ ಆರ್‌ ಟಿ ಜಿ ಎಸ್/ನೆಫ್ಟ್‌ ಸೌಲಭ್ಯ ಸೇರಿದಂಥೆ ವಿವಿಧ ಸಾಲ ಸೌಲಭ್ಯಗಳು ಈ ಶಾಖೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ.

ಈ ನೂತನ ಶಾಖೆಯನ್ನು ರಾಜ್ಯ ಸರಕಾರದ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಉದ್ಘಾಟಿಸುಲಿದ್ದು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇವರು ದೀಪ ಪ್ರಜ್ವಲನೆ ಮಾಡಲಿರುವರು. ಇದೇ ವೇಳೆ ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶವನ್ನು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಹಾಗೂ ಬ್ಯಾಂಕಿನ ಅಧ್ಯಕ್ಷ ಡಾ|ಎಂ.ಎನ್‌ ರಾಜೇಂದ್ರ ಕುಮಾರ್‌ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು. ಕೃಷಿ ಸಚಿವ ಬಿಸಿ ಪಾಟೀಲ್‌ ಅವರು ಹೊಸ ಸ್ವಸಹಾಯ ಗುಂಪುಗಳ ಉದ್ಘಾಟನೆ ನೆರವೇರಿಸಲಿರುವರು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ ಅಂಗಾರ ಅವರು ಪ್ರಥಮ ಠೇವಣಿ ಪತ್ರ ಬಿಡುಗಡೆಗೊಳಿಸುವರು. ಶಿವಮೊಗ್ಗ ಸಂಸದ ಬಿ, ವೈ ರಾಘವೇಂದ್ರ ಅವರು ನವೋದಯ ಜಂಟಿ ಬಾಧ್ಯತಾ ಗುಂಪುಗಳಿಗೆ ಸಾಲ ವಿತರಣೆ ನರೆವೇರಿಸುವರು.

ನೂತನ ಶಾಖೆಯ ಗಣಕೀಕರಣದ ಉದ್ಘಾಟನೆಯನ್ನು ಹಿಂದುಳೀದ ವರ್ಗಗಳ ಯೋಜನಾ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ, ಭದ್ರತಾ ಕೋಶದ ಉದ್ಘಾಟನೆಯನ್ನು ಬೈಂದೂರು ಶಾಸಕ ಸುಕುಮಾರ್‌ ಶೆಟ್ಟಿ, ವಾಹನ ಸಾಲ ಪತ್ರ ವಿತರಣೆಯನ್ನು ವಿಧಾನಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ, ಲಾಕರ್‌ ಕೀ ಹಸ್ತಾಂತರವನ್ನು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ನೆರವೇರಿಸುವರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಇದರ ನಿರ್ದೇಶಕ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಲಿ. ಇದರ ಅಧ್ಯಕ್ಷ ಬಿ ಜಯಕರ ಶೆಟ್ಟಿ ಇಂದ್ರಾಳಿ, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲಾಸಹಕಾರಿ ಮೀನು ಮಾರಾಟ ಫೆಡರೇಶನ್‌ ನಿ. ಇದರ ಅಧ್ಯಕ್ಷ ಯಶ್ಪಾಲ್‌ ಸುವರ್ಣ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ. ಉಪ್ಪುಂದ ಇದರ ಅಧ್ಯಕ್ಷ ಎಸ್‌ ಪ್ರಕಾಶ್ಚಂದ್ರ ಶೆಟ್ಟಿ, ಉಪ್ಪುಂದ ಗ್ರಾಮಪಂಚಾಯ್‌ ಅಧ್ಯಕ್ಷೆ ಲಕ್ಷ್ಮೀ ಖಾರ್ವಿ, ಕಟ್ಟಡ ಮಾಲಿಕ ಹಿರಿಯಣ್ಣ ಶೆಟ್ಟಿ ಇವರು ಸಮಾರಂಭದಲ್ಲಿ ಭಾಗವಹಿಸುವತರು ಎಂದು ಬ್ಯಾಂಕಿ ಪ್ರಕಟಣೆ ತಿಳಿಸಿದೆ.


Spread the love