ಐಎಎಸ್ ಅಧಿಕಾರಿ ಸದಾಶಿವ ಪ್ರಭು ಅವರಿಗೆ ಪಿತೃ ವಿಯೋಗ

Spread the love

ಐಎಎಸ್ ಅಧಿಕಾರಿ ಸದಾಶಿವ ಪ್ರಭು ಅವರಿಗೆ ಪಿತೃ ವಿಯೋಗ

ಉಡುಪಿ: ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ವೈ.ವಿಠ್ಠಲ ಪ್ರಭು (85) ಅವರು ಬುಧವಾರ ಅಪರಾಹ್ನ 4 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು.

ಅವರು ಪತ್ನಿ , ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಅವರ ಹಿರಿಯ ಪುತ್ರ ಕೃಷ್ಣಮೂರ್ತಿ ಪ್ರಭು ಆದಾಯ ತೆರಿಗೆ ಇಲಾಖೆಯ ನಿವ್ರತ್ತ ಅಧಿಕಾರಿ ಮತ್ತು 2 ನೇ ಪುತ್ರ ಬಿ.ಸದಾಶಿವ ಪ್ರಭು ಐಎಎಸ್ ವಿಜಯನಗರ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅವರ ಅಂತ್ಯಕ್ರೀಯೆಯು ಎಳ್ಳಾರೆಯ ಬೆಂಬರಬೈಲಿನ ಅವರ ಸ್ವಗೃಹದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


Spread the love