ಐಕಳ ಹರಿಶ್ ಶೆಟ್ಟಿಯವರ ನಿವಾಸಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

Spread the love

ಐಕಳ ಹರಿಶ್ ಶೆಟ್ಟಿಯವರ ನಿವಾಸಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರಿಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ ಒಕ್ಕೂಟದ ಸಭೆಯಲ್ಲಿ ನಿರ್ಣಯಿಸಿದಂತೆ ಬಂಟ ಸಮುದಾಯದ ಶತಾಯುಷಿ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎನ್ನುವ ಗಡಿನಾಡ ಹೋರಾಟಗಾರ ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ನಾಡೋಜ ಕೈಯ್ಯಾರ ಕಿ0ಞ್ಞಣ್ಣ ರೈ ಇವರ ಕುರಿತಾದ ಲೇಖನವನ್ನು ಪಠ್ಯಪುಸ್ತಕದಲ್ಲಿ ಅಳವಡಿಸದೆ ಇರುವುದರ ಬಗ್ಗೆ ಸರಕಾರದ ಗಮನವನ್ನು ಸೆಳೆಯಲು ಮತ್ತು ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಲು ಒತ್ತಾಯಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರಾದ ಹಾಗೂ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು  ಕಿನ್ನಿಗೋಳಿ ಯಲ್ಲಿರುವ ಐಕಳ ಹರೀಶ್ ಶೆಟ್ಟಿ ಯವರ ನಿವಾಸಕ್ಕೆ ಭೇಟಿ ನೀಡಿ ನಳಿನ್ ಕುಮಾರ್ ಕಟೀಲ್ ಅವರು ವಿಸ್ತೃತ ಚರ್ಚೆಯನ್ನು ನಡೆಸಿದರು.

ನಳಿನ್ ಕುಮಾರ್ ಅವರು ಸರಕಾರದ ಶಿಕ್ಷಣ ಸಚಿವ ನಾಗೇಶ್ ಅವರ ಜೊತೆ ಫೋನ್ ಮೂಲಕ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಜೊತೆ ಮಾತನಾಡಿಸಿ ಅದರಂತೆ ಪಠ್ಯಪುಸ್ತಕದಲ್ಲಿ ಹಿರಿಯ ಕವಿಯ ಹೆಸರನ್ನು ಹಿಂದಿನಂತೆ ಸೇರ್ಪಡೆಗೊಳಿಸುವ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರಿಗೆ ನೀಡಿದರು.

ಅದರಂತೆ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜೊತೆ ಮಾತನಾಡಿ ಶೀಘ್ರ ಕ್ರಮ ಕೈ ಗೊಳ್ಳುವುದಾಗಿ ತಿಳಿಸಿದರು.

ಇದರ ಜೊತೆ ಆರ್ ಟಿ ಒ ಬಳಿ ಇರುವ ಎ ಬಿ ಶೆಟ್ಟಿ ಸರ್ಕಲ್ ಅನ್ನು ಕೂಡ ಶೀಘ್ರದಲ್ಲಿ ಅನುಷ್ಠಾನ ಮಾಡುವುದಾಗಿ ಸಂಸದರು ಭರವಸೆಯನ್ನ ನೀಡಿದರು.


Spread the love