
ಐಕ್ಯತೆ, ದೇಶಾಭಿಮಾನದಿಂದ ಸ್ವಾತಂತ್ರ್ಯ ಸಿಕ್ಕಿದೆ: ದ್ವಜಾರೋಹಣ ನೆರವೇರಿಸಿ ಎಸಿ ರಶ್ಮಿ
ಕುಂದಾಪುರ: ಕೇವಲ ವ್ಯಾಪಾರಕ್ಕಾಗಿ ಬಂದ ಈಸ್ಟ್ ಇಂಡಿಯಾ ಕಂಪೆನಿ ನಮ್ಮ ಇಡೀ ದೇಶವನ್ನು ಸಂಪೂರ್ಣವಾಗಿ ಲೂಟಿ ಹೊಡೆದಿತ್ತು. ಆ ಸಮಯದಲ್ಲಿ ನಮ್ಮೊಳಗೆ ಒಗ್ಗಟ್ಟಿಲ್ಲದಿದ್ದರೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ ಐಕ್ಯತೆಯಿಂದ, ದೇಶಾಭಿಮಾನದಿಂದ ನಮ್ಮ ಹಿರಿಯರು ಹೋರಾಟ ನಡೆಸಿದ ಕಾರಣದಿಂದಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್ ಹೇಳಿದರು.
ಮಂಗಳವಾರ ತಾಲೂಕು ಆಡಳಿತದಿಂದ ಕುಂದಾಪುರದ ಗಾಂಧಿ ಮೈದಾನದಲ್ಲಿ ಜರುಗಿದ 77ನೇ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣಗೈದು ಸಂದೇಶ ನೀಡಿದರು.
ಒಗ್ಗಟ್ಟನ್ನೇ ಮೂಲಮಂತ್ರವಾಗಿಸಿಕೊಂಡು ನಮ್ಮ ಸ್ವಾತಂತ್ರ್ಯ ಹೋರಾಟಗಾರು ಪ್ರತಿಯೊಬ್ಬ ಪ್ರಜೆಗೂ ಇದು ನನ್ನ ಭಾರತ, ನನ್ನ ತಾಯ್ನಾಡೆಂಬ ರಕ್ತ ಸಂಚಲನ ಮೂಡಿಸಿದ ಬಳಿಕ ನಮಗೆ ಸ್ವಾತಂತ್ರ್ಯ ಬರಲು ಸಾಧ್ಯವಾಯಿತು. ಈ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನಗಳನ್ನು ಮಾಡಿದ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ನೆನೆಯಬೇಕು. ಶಾಂತಿ ಮತ್ತು ಅಹಿಂಸೆ ತತ್ವದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಇದೇ ದ್ಯೇಯವನ್ನು ದಿನನಿತ್ಯವೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸುಂದರ ಭಾರತದ ನಿರ್ಮಾಣವಾಗಲು ಸಾಧ್ಯವಾಗುತ್ತz ಎಂದರು.
ನಮ್ಮ ದೇಶಕ್ಕೆ ಬಲಿಷ್ಠ ಸಂವಿಧಾನವನ್ನು ಡಾ. ಬಿ.ಆರ್ ಅಂಬೇಡ್ಕರ್ ಅವರು ನೀಡಿದ್ದಾರೆ. ಅವರು ಹಾಕಿಕೊಟ್ಟ ಸಂವಿಧಾನದಿಂದಲೇ ನಮ್ಮ ದೇಶ ಒಗ್ಗಟ್ಟಿನಲ್ಲಿ ಮುಂದುವರೆಯಲು ಸಾಧ್ಯವಾಗಿದೆ. ಆರ್ಥಿಕ, ಶೈಕ್ಷಣಿಕವಾಗಿ, ವೈಜಾÐನಿಕವಾಗಿ ನಾವು ಬಹಳಷ್ಟು ಸಾಧನೆ ಮಾಡಿದ್ದೇವೆ ಎಂದರು.
ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಯೂ ನಿಮ್ಮ ನಿಮ್ಮ ಕಚೇರಿಗೆ ಬರುವ ಪ್ರತಿಯೊಬ್ಬ ವ್ಯಕ್ತಿಗೂ ಆದಷ್ಟು ಸಹಾಯ ಮಾಡಬೇಕು. ಆ ವ್ಯಕ್ತಿ ನಿಮ್ಮ ಕಚೇರಿಯಿಂದ ಮರಳುವಾಗ ನಗುಮೊಗದಿಂದ ತೃಪ್ತಿಕರವಾಗಿ ಹೋಗಬೇಕು. ಹೀಗೆಯೇ ಪ್ರತಿಯೊಬ್ಬರು ಮಾಡಿದರೆ ಆಡಳಿತದ ಪರವಾಗಿ ಉತ್ತಮ ವಾತಾವರಣ ಸೃಷ್ಠಿಸಲು ಸಾಧ್ಯ. ತ್ಯಾಗ-ಬಲಿದಾನಗಳಿಂದ ನಮ್ಮ ಹಿರಿಯರು ಕೊಟ್ಟ ಸ್ವಾತಂತ್ರ್ಯವನ್ನು ಇಂದಿಗೂ ಕಾಪಾಡುತ್ತಿರುವ ಗಡಿ ಪ್ರದೇಶದಲ್ಲಿ ಬಿಸಿಲು, ಗಾಳಿ, ಮಳೆ ಯಾವುದನ್ನು ಲೆಕ್ಕಿಸದೇ ನಮ್ಮ ದೇಶವನ್ನು ಕಾಯುವ ಯೋಧರನ್ನು ನೆನೆಯುತ್ತಾ ಈ ದೇಶವನ್ನು ಮತ್ತಷ್ಟು ಉನ್ನತ ಪ್ರಗತಿಯತ್ತ ಸಾಗಿಸಲು ನಾವೆಲ್ಲರೂ ಪಣ ತೊಡೋಣ ಎಂದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಂಧೀಜಿ, ಸರ್ದಾರ್ ವಲಭ ಬಾಯಿ ಪಟೇಲ್, ಶಾಸ್ತ್ರೀಜಿ, ವೀರ ಸಾವರ್ಕರ್, ಭಗತ್ ಸಿಮಗ್ ಅವರಂತಹ ಅನೇಕ ಮಂದಿ ಮಹನೀಯರ ಹೋರಾಟ, ತ್ಯಾಗ, ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಕುಂದಾಪುರದಲ್ಲೂ ಸಾಕಷ್ಟು ಮಂದಿ ಹಿರಿಯರು ಈ ಹೋರಾಟದಲ್ಲಿ ಭಾಗವಹಿಸಿದ್ದು, ಅವರೆಲ್ಲರ ತ್ಯಾಗ, ಪರಿಶ್ರಮವನ್ನು ನಾವಿಂದು ನೆನೆಯಬೇಕಿದೆ. ಪ್ರತಿಯೊಬ್ಬ ಪ್ರಜೆಯು ಒಳ್ಳೆಯ ಕೆಲಸವನ್ನು ಮಾಡುವ ಮೂಲಕ, ನಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆದರೆ ಅದುವೇ ದೇಶದ ಪ್ರಗತಿಗೆ ದಾರಿದೀಪವಾಗಲಿದೆ. ಜಾತಿ, ಧರ್ಮ, ಪಕ್ಷಕ್ಕಿಂತ ದೇಶವೇ ಮೊದಲು ಎನ್ನುವ ಭಾವನೆ ನಮ್ಮೆಲ್ಲರಲಿ ಇರಲಿ ಎಂದರು.
ಎಸೆಸೆಲ್ಸಿ ಸಾಧಕರಿಗೆ ಸನ್ಮಾನ:
2022-23 ನೇ ಸಾಲಿನ ಎಸೆಸೆಲ್ಸಿಯಲ್ಲಿ ತಾಲೂಕಿಗೆ ಗರಿಷ್ಠ ಅಂಕ ಪಡೆದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಲಹರಿ ದೇವಾಡಿಗ, ವಿ.ಕೆ. ಆರ್. ಆಂಗ್ಲ ಮಾಧ್ಯಮ ಶಾಲೆಯ ಪ್ರಥಮ್ ಆರ್. ತಾಳಿಕೋಟೆ, ಕೊರಗ ವಿದ್ಯಾರ್ಥಿ ಬಿದ್ಕಲ್‍ಕಟ್ಟೆ ಕೆಪಿಎಸ್ ಶಾಲೆಯ ಸುಜಯ್ ಅವರನ್ನು ಸನ್ಮ್ಮಾನಿಸಲಾಯಿತು. ತಾಳೆ ಬೆಳೆ ಯೋಜನೆಯಡಿ ರೈತರಿಗೆ ತಾಳೆ ಗಿಡಗಳನ್ನು ವಿತರಿಸಲಾಯಿತು.
ಪುರಸಭಾ ಸದಸ್ಯರು, ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು, ಮಾಜಿ ಸದಸ್ಯರು, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಡಿವೈಎಸ್‍ಪಿ ಬೆಳ್ಳಿಯಪ್ಪ ಕೆ.ಯು., ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವೀಂದ್ರ ನಾಯಕ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ ಆರ್., ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನುರಾಧ ಹಾದಿಮನೆ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಭಾಗ್ಯಲಕ್ಷ್ಮಿ, ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ, ವಿವಿಧ ಶಾಲಾ- ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಶೋಭಾ ಶೆಟ್ಟಿ ಸ್ವಾಗತಿಸಿ, ತಾಲೂಕು ಯುವಜನಾ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಕುಸುಮಾಕರ್ ಶೆಟ್ಟಿ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಕ ಪಥ ಸಂಚಲನ
ಧ್ವಜಾರೋಹಣದ ಅನಂತರ ಆಕರ್ಷಕ ಪಥ ಸಂಚಲನ ಮತ್ತಷ್ಟು ಕಳೆ ತಂದಿತು. ಎಸಿ ರಶ್ಮಿ ಎಸ್.ಆರ್. ಅವರು ಗೌರವ ವಂದನೆ ಸ್ವೀಕರಿಸಿದರು. ಕುಂದಾಪುರದ ಪೆÇ್ರೀಬೆಷನರಿ ಡಿವೈಎಸ್‍ಪಿ ರವಿ ಖಡ್ಗಧಾರಿಯಾಗಿ ಕಮಾಂಡ್ ನೀಡಿದರು. ಪೆÇಲೀಸ್ ತಂಡ, ಗೃಹ ರಕ್ಷಕದಳ, ಕುಂದಾಪುರದ ವಿವಿಧ ಶಾಲೆಗಳ ಎನ್‍ಸಿಸಿ, ಸ್ಕೌಟ್- ಗೈಡ್ಸ್ ತಂಡಗಳು ಹಾಗೂ ಪೌರ ಕಾರ್ಮಿಕರ ತಂಡ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಬಳಿಕ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
25 ವರ್ಷಗಳ ಬಳಿಕ ಶಾಸಕರು ಭಾಗಿ!:
ಕಳೆದ ಐದು ಅವಧಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಒಂದು ಬಾರಿಯೂ ತಾಲೂಕು ಆಡಳಿತ ದ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಆ ಬಾರಿಯ ನೂತನ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಭಾಗಿಯಾಗುವ ಮೂಲಕ 25 ವರ್ಷಗಳ ಕಾಲ ಕುಂದಾಪುರ ಕ್ಷೇತ್ರದ ಶಾಸಕರ ಸತತ ಗೈರಿಗೆ ಬ್ರೇಕ್ ಹಾಕಿ ಗಮನ ಸೆಳೆದರು.