ಐದನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡ ಸಹಾಯಕ ಪ್ರಾಧ್ಯಪಕ

Spread the love

ಐದನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡ ಸಹಾಯಕ ಪ್ರಾಧ್ಯಪಕ

ಸುರತ್ಕಲ್‌: ಇಲ್ಲಿನ ಎನ್‌ ಐ ಟಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರೋರ್ವರು ತನ್ನ ಬಾಡಿಗೆ ಮನೆಯ ಐದನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.

ಗಾಯಗೊಂಡವನ್ನು ಮನೀಶ್‌ ಕುಮಾರ್‌ (36) ಎಂದು ಗುರುತಿಸಲಾಗಿದೆ.

ಮಾಹಿತಿಗಳ ಪ್ರಕಾರ ಮೂಲತಃ ಉತ್ತರ ಪ್ರದೇಶದ ಮನೀಶ್‌ ಕುಮಾರ್‌ ಅವರು ಎನ್‌ ಐ ಟಿ ಕೆ ಸುರತ್ಕಲ್‌ ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಮುಕ್ಕದಲ್ಲಿರುವ ತನ್ನ ಬಾಡಿಗೆ ಮನೆಯ ಐದನೇ ಮಹಡಿಯಲ್ಲಿ ಏರ್‌ ಟೆಲ್‌ ಡಿಸ್‌ ಜೋಡಿಸಲು ತೆರಳಿದ್ದ ವೇಳೆ ಆಯತಪ್ಪಿ ಫೈಬರ್‌ ಶೀಟ್‌ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love