ಐರಿನ್ ಪಿಂಟೊ ಅವರಿಗೆ ಕೊಂಕಣಿ ಲೇಖಕ ಸಂಘದ ಸಾಹಿತ್ಯ ಪ್ರಶಸ್ತಿ

Spread the love

ಐರಿನ್ ಪಿಂಟೊ ಅವರಿಗೆ ಕೊಂಕಣಿ ಲೇಖಕ ಸಂಘದ ಸಾಹಿತ್ಯ ಪ್ರಶಸ್ತಿ

ಮಂಗಳೂರು: ಕೊಂಕಣಿ ಲೇಖಕ ಸಂಘ ಕರ್ನಾಟಕ ಸಂಘದ ವತಿಯಿಂದ ಖ್ಯಾತ ಕೊಂಕಣಿ ಲೇಖಕಿ ಐರಿನ್ ಪಿಂಟೊ ಅವರನ್ನು ಈ ಬಾರಿಯ ಕೊಂಕಣಿ ಸಾಹಿತ್ಯ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಪ್ರಶಸ್ತಿಯು ರೂಪಾಯಿ 25000 ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. 2023 ರ ಫೆಬ್ರವರಿ 25ರಂದು ಮಂಗಳೂರಿನ ಬಜ್ಜೋಡಿ ಸಂದೇಶ ಪ್ರತಿಷ್ಠಾಣದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಕ್ಣೋ ಕೊಂಕಣಿ ವಾರಪತ್ರಿಕೆಯ ಮಾಜಿ ಸಂಪಾದಕರಾದ ವಂ|ಫ್ರಾನ್ಸಿಸ್ ರೊಡ್ರಿಗಸ್ ಭಾಗವಹಿಸಲಿದ್ದು, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ|ರಾಧಕೃಷ್ಣ ಎನ್ ಬೆಳ್ಳೂರ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.


Spread the love