Home Mangalorean News Kannada News ಐರ್ಲೆಂಡ್‌ ನಲ್ಲಿ ಕಡಬದ ಯುವಕ ನಿಗೂಢ ಸಾವು – ಆತ್ಮಹತ್ಯೆ ಶಂಕೆ 

ಐರ್ಲೆಂಡ್‌ ನಲ್ಲಿ ಕಡಬದ ಯುವಕ ನಿಗೂಢ ಸಾವು – ಆತ್ಮಹತ್ಯೆ ಶಂಕೆ 

Spread the love

ಐರ್ಲೆಂಡ್‌ ನಲ್ಲಿ ಕಡಬದ ಯುವಕ ನಿಗೂಢ ಸಾವು – ಆತ್ಮಹತ್ಯೆ ಶಂಕೆ 

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಕಡಬ ಮೂಲದ ಯುವಕನೊಬ್ಬ ಐರ್ಲೆಂಡ್ ನಲ್ಲಿ ನಿಗೂಢವಾಗಿ ಸಾವನಪ್ಪಿದ ಘಟನೆ ನಡೆದಿದೆ.

ಮೃತನನ್ನು ಐರ್ಲೆಂಡ್ ದೇಶದ ಡಬ್ಲಿನ್ ನಗರದಲ್ಲಿ ವಾಸವಿದ್ದ ಸಾಂಜೋ ಸುನಿಲ್(31) ಎಂಬವರು ತನ್ನ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಸಾಂಜೋ ಸುನಿಲ್, ಕಡಬ ತಾಲೂಕಿನ ಕುಟ್ರುಪಾಡಿ ವಿಮಲಗಿರಿ ಎಂಬಲ್ಲಿನ ನಿವಾಸಿಯಾಗಿದ್ದು ವರ್ಷದ ಹಿಂದೆ ಐರ್ಲೆಂಡಿನಲ್ಲಿ ನರ್ಸ್ ಆಗಿರುವ ಕಡಬದ ಯುವತಿಯನ್ನೇ ವಿವಾಹವಾಗಿದ್ದರು.

ಹಿಂದೆ ಇಸ್ರೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಸುನಿಲ್ ಅವರು ಕೆಲ ತಿಂಗಳ ಹಿಂದಷ್ಟೇ ಐರ್ಲೆಂಡಿಗೆ ತೆರಳಿದ್ದರು. ಪತ್ನಿ ಐರ್ಲೆಂಡ್ ನಲ್ಲಿ ನರ್ಸ್ ಆಗಿ ಕೆಲಸ ಆಗಿದ್ದರಿಂದ ಸುನಿಲ್ ಕೂಡ ತನ್ನ ಕೆಲಸವನ್ನು ಐರ್ಲೆಂಡಿಗೆ ಶಿಫ್ಟ್ ಮಾಡಿಸಿದ್ದರು.‌ ಇದೀಗ ಐರ್ಲೆಂಡಿನ ತಮ್ಮ ಮನೆಯಲ್ಲೇ ಸುನಿಲ್ ಪತ್ನಿ ಇಲ್ಲದೇ ಇದ್ದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಅನುಮಾನಗಳಿದ್ದು ಇದರ ಜೊತೆಗೆ ಇತರೇ ಸಾಧ್ಯತೆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪತ್ನಿ ಕೆಲಸಕ್ಕೆ ಹೋಗಿದ್ದ ವೇಳೆ ಘಟನೆ ನಡೆದಿದ್ದಾಗಿ ಮಾಹಿತಿ ಲಭಿಸಿದೆ.


Spread the love

Exit mobile version