
ಒಂದು ಕುಟುಂಬದ ಕರ್ನಾಟಕವನ್ನು ಹಂಚಿಕೊಂಡಿದೆ: ಬಿ.ಎಲ್.ಸಂತೋಷ್
ಮೈಸೂರು: ರಾಜ್ಯದಲ್ಲಿ ಒಂದು ಕುಟುಂಬದವರು ಕರ್ನಾಟಕವನ್ನು ಹಂಚಿಕೊಂಡಿದ್ದಾರೆ. ಯಾರಿಗೆ ಬೇಕಾದರೂ ಟಿಕೆಟ್ ಘೋಷಿಸುವ ಅಧಿಕಾರವನ್ನು ಆ ಕುಟುಂಬದ ಸದಸ್ಯರು ಹೊಂದಿದ್ದಾರೆ. ಅವರು ಟಿಕೆಟ್ ಘೋಷಿಸುವುದು ಅಥವಾ ಘೋಷಿಸದೇ ಇರುವುದರಲ್ಲಿ ವ್ಯತ್ಯಾಸವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಮೈಸೂರು ನಗರ ಹಾಗೂ ಗ್ರಾಮಾಂತರ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹೊಂದಾಣಿಕೆಯಿಂದ ಅಭ್ಯರ್ಥಿಗಳ ಪಟ್ಟಿ ಘೋಷಿಸಲಿದ್ದಾರೆ ಎನ್ನಲಾಗಿತ್ತು. ಹಲವು ದಿನಾಂಕ ಘೋಷಿಸಲಾಯಿತು. ಈಗ ಮಾರ್ಚ್ ತಿಂಗಳಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಆದರೆ, ವಿಶೇಷ ಪಕ್ಷವಾಗಿರುವ ಜೆಡಿಎಸ್‌ನಲ್ಲಿ ಯಾವ ನಿಯಮಗಳು ಇಲ್ಲ ಎಂದು ಟೀಕಿಸಿದರು.
ಜೆಡಿಎಸ್ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಚುನಾವಣಾ ಸಮಿತಿ ಇಲ್ಲ. ಕಾರ್ಯಕರ್ತರು ಇಲ್ಲ. ಒಬ್ಬರು ಕುಳಿತು ಸಹಿ ಮಾಡಿದರೆ ಮುಗಿಯಿತು. ಆ ಪಟ್ಟಿ ಯಾವಾಗ ಬೇಕಾದರೂ ಬದಲಾಗಬಹುದು. ಇದು ನಮಗೆ ಇದು ನಿಮಗೆ ಎಂದು ಕರ್ನಾಟಕ ಹಂಚಿಕೊಂಡಿರುವ ಆ ಕುಟುಂಬದವರು ಟಿಕೆಟ್ ಘೋಷಿಸಬಹುದು. ಈ ವಿಶೇಷ ಪಕ್ಷದೊಂದಿಗೆ ಹೋಲಿಕೆ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಹಲವು ಆಪಾದನೆ ಮಾಡಿದರೂ ಲೋಕಾಯುಕ್ತ, ಎಸಿಬಿ, ಹೈಕೋರ್ಟ್ ಎಲ್ಲಾದರೂ ಒಂದು ಕಡೆ ದೂರು ಕೊಟ್ಟರಾ? ಯಾಕೇ ಕೊಡಲಿಲ್ಲ. ಹಾಗಾಗಿ ಸಿದ್ದರಾಮಯ್ಯ ಅವರ ಆಪಾದನೆಗಳಲ್ಲಿ ಸತ್ಯ ಇಲ್ಲ ಎಂಬುದು ಜನರಿಗೆ ಮನವರಿಕೆಯಾಗಿದೆ ಎಂದರು.
ಆಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಕಾರ್ಯಕರ್ತರು ತಮಗೆ ಅಧಿಕಾರ ಸಿಗುವುದಿಲ್ಲ ಎಂಬ ಆಸೆ ಬಿಟ್ಟಿದ್ದರು. ಕೇಂದ್ರ ಮತ್ತು ರಾಜ್ಯ ಬಜೆಟ್ ಮಂಡನೆಯ ಬಳಿಕ ಸಾಮಾನ್ಯ ಸ್ಥಿತಿಗೆ ತಲುಪಿದ್ದೇವೆ. ಈವರೆಗಿನ ಯಾವ ಸರ್ವೇಯೂ ಕಾಂಗ್ರೆಸ್‌ಗಿಂತ ಬಿಜೆಪಿ ಹಿಂದೆ ಇಲ್ಲ ಎಂದು ಹೇಳಿಲ್ಲ. ಇದೇ ಆತ್ಮವಿಶ್ವಾಸದೊಂದಿಗೆ ವಿಜಯದ ಕಡೆಗೆ, ಗೆಲುವಿನ ಕಡೆಗೆ ಕೊಂಡೊಯ್ಯಲು ದೃಢವಾದ ಹೆಜ್ಜೆ ಇಟ್ಟಿzವೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಗುಜರಾತಿನ ಗೆಲುವು ನಮಗೆ ಹುಮ್ಮಸ್ಸು ತಂದಿದೆ. ಹಿಮಾಚಲದಲ್ಲಿ ಶೇ.9ರಂದು ಮತಗಳಿಂದ ಸೋತಿzವೆ. ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನ ದೊರೆತಿದೆ. ಕಾಂಗ್ರೆಸ್ ಶಿಲಾನ್ಯಾಸ ಮಾಡಿದ್ದನ್ನು ನಾವು ಉದ್ಘಾಟಿಸುತ್ತಿzವೆ. ಮೋದಿ ನಾಯಕತ್ವ, ಅಭಿವೃದ್ಧಿ ಕೆಲಸಗಳಿಂದ ಜನರು 2024ರಲ್ಲೂ ಜನರು ಆಶೀರ್ವಾದ ಮಾಡುತ್ತಾರೆ. ಅದಕ್ಕೆ ಪೂರ್ವಭಾವಿಯಾಗಿ 2023ರಲ್ಲಿ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಚುನಾವಣೆ ವೇಳೆ ಕರ್ನಾಟಕಕ್ಕೆ ಬರುತ್ತಾರೆಂದು ಟೀಕಿಸುವ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದ ಬಿ.ಎಲ್.ಸಂತೋಷ್, ಮೋದಿ ದೇಶದ ಪ್ರಧಾನಿಯೂ ಹೌದು. ಬಿಜೆಪಿ ಪಕ್ಷದ ನಾಯಕರು ಹೌದು. ಒಬ್ಬರು ಇಟಲಿ, ರೋಮ್ ಸುತ್ತುತ್ತಾರೆ. ನಮ್ಮ ನಾಯಕರು ದೇಶ ಸುತ್ತುತ್ತಾರೆ. ಯಾರ್‍ಯಾರಿಗೆ ಯಾವ ಯಾವ ಅಭಿರುಚಿ ಇದೆಯೋ ಅದನ್ನು ಹೊರಹಾಕುತ್ತಾರೆ. ಮುಂದೆಯೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಲು ಮೋದಿ ಬರಲಿದ್ದಾರೆ ಎಂದರು.
ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ.ನಾಗೇಂದ್ರ, ವಿಧಾನ ಪರಿಷತ್ ಸದಸ್ಯೆ ಸುಜಾ ಕುಶಾಲಪ್ಪ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ಬಿಜೆಪಿ ನಗರಾಧ್ಯP ಶ್ರೀವತ್ಸ, ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಬಿಜೆಪಿ ರಾಜ್ಯ ಉಪಾಧ್ಯP ರಾಜೇಂದ್ರ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮೈ.ವಿ.ರವಿಶಂಕರ್, ಅಶ್ವತ್ಥ್ ನಾರಾಯಣ, ಸಂದೇಶಸ್ವಾಮಿ, ತೋಂಟದಾರ್ಯ, ಭಾರತೀ ಶಂಕರ್, ಸಿ.ರಮೇಶ್, ಪ್ರತಾಪ್ ಭಾಗವಹಿಸಿದ್ದರು.