ಒಂದು ದಿನದ ಕ್ರೀಡಾಧಿಕಾರಿಯಾದ ವಿದ್ಯಾರ್ಥಿನಿ ಸುಪ್ರೀತಾ

Spread the love

ಒಂದು ದಿನದ ಕ್ರೀಡಾಧಿಕಾರಿಯಾದ ವಿದ್ಯಾರ್ಥಿನಿ ಸುಪ್ರೀತಾ

ಮಂಡ್ಯ: ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಒಂದು ದಿನದ ಕ್ರೀಡಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಅವಕಾಶವನ್ನು ಸುಪ್ರೀತಾ ಎಂ. ಆನಂದ್ ಅವರು ಪಡೆದುಕೊಂಡು ಜಿಲ್ಲಾ ಕ್ರೀಡಾ ಅಧಿಕಾರಿಯ ಅನುಭವವನ್ನು ಪಡೆದುಕೊಂಡರು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂ ಪ್ರಕಾಶ್ ಅವರು ತಿಳಿಸಿದರು.

18 ವರ್ಷದಿಂದ 23 ವರ್ಷದೊಳಗಿನ ಹೆಣ್ಣು ಮಕ್ಕಳು ತಮಗೆ ಸ್ಫೂರ್ತಿ ದಾಯಕವಾಗಿರುವ ಗಣ್ಯ ಮಾನ್ಯರನ್ನು ರನ್ನು ಕುರಿತು 30 ಸೆಕೆಂಡ್ ಯಿಂದ ಒಂದು ನಿಮಿಷದ ಕಾಲಾವಧಿಯಲ್ಲಿ ಅವರ ಕುರಿತು ಮಾತನಾಡಿದ ವಿಡಿಯೋವನ್ನು ಕಳುಹಿಸುವಂತಹ ಸ್ಪರ್ಧೆಯಲ್ಲಿ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 11 ಹೆಣ್ಣು ಮಕ್ಕಳು ವಿಡಿಯೋ ವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಕಳುಹಿಸಿದರು. ಇದರಲ್ಲಿ ಅತ್ಯುತ್ತಮವಾಗಿ ಮಾತನಾಡಿದಂತಹ ಸುಪ್ರೀತಾ ಎಂ. ಆನಂದ್ ರವರನ್ನು ಸಮಿತಿಯಿಂದ ಒಂದು ದಿನದ ಕ್ರೀಡಾ ಅಧಿಕಾರಿಯಾಗಿ ಆಯ್ಕೆ ಮಾಡಲಾಯಿತು. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5:30 ರ ವರೆಗೆ ಸುಪ್ರೀತಾರವರು ಕ್ರೀಡಾ ಇಲಾಖೆಯ ಅಧಿಕಾರಿಯ ಕಾರ್ಯವೈಖರಿಯನ್ನು ವೀಕ್ಷಿಸಿ ಅನುಭವವನ್ನು ಪಡೆದುಕೊಂಡರು ಎಂದು ಹೇಳಿದರು.

ಒಂದು ದಿನ ಕ್ರೀಡಾ ಅಧಿಕಾರಿಯಾಗಿ ಅನುಭವವನ್ನು ಪಡೆದುಕೊಂಡ ಸುಪ್ರೀತಾ ಎಂ.ಆನಂದ್ ಅವರು ಮಾತನಾಡಿ ಒಂದು ದಿನ ಕ್ರೀಡಾ ಅಧಿಕಾರಿಯಾಗಿ ಆಯ್ಕೆಯಾದಂತಹ ವಿಷಯವನ್ನು ಹೇಳಿ ನನಗೆ ಬಹಳ ಸಂತೋಷವಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಬೆಳಗ್ಗೆ 10 ಗಂಟೆಗೆ ಕಚೇರಿಗೆ ಭೇಟಿ ನೀಡಿದಾಗ ಕಚೇರಿಯಲ್ಲಿ ಬಹಳ ವಿಶೇಷವಾಗಿ ನನ್ನನ್ನು ಸ್ವಾಗತ ಮಾಡಿಕೊಂಡರು.

ನಂತರದಲ್ಲಿ ಕಚೇರಿಯ ಎಲ್ಲಾ ಸಿಬ್ಬಂದಿಗಳನ್ನು ಪರಿಚಯಿಸಿ ಕ್ರೀಡಾ ಇಲಾಖೆಯಲ್ಲಿನ ಕಾರ್ಯವೈಖರಿಯಗಳ ಬಗ್ಗೆ ತಿಳಿಸಿದರು.ಒಬ್ಬ ಕ್ರೀಡಾ ಅಧಿಕಾರಿಯಾಗಿ ಯಾವ ರೀತಿಯಾಗಿ ಕಾರ್ಯನಿರ್ವಹಿಸಬಹುದು ಎಂಬುವಂತಹ ಅನುಭವವನ್ನು ನಾನು ಪಡೆದುಕೊಂದಿದ್ದು ಸಂತಸ ತಂದಿದೆ ಎಂದರು.

ಕ್ರೀಡಾ ಇಲಾಖೆಯಲ್ಲಿ ನೀಡುವಂತಹ ಯೋಜನೆಗಳು ಹಾಗೂ ಕ್ರೀಡಾಪಟುಗಳಿಗೆ ಯಾವ ರೀತಿಯಾಗಿ ಮೂಲ ಸೌಕರ್ಯಗಳನ್ನು ಒಳಗೊಂಡಂತೆ ಪ್ರೋತ್ಸಾಹಿಸುವಂತಹ ಪರಿಯನ್ನು ಅರಿತುಕೊಂಡು ನನಗೆ ಬಹಳ ಸಂತೋಷವಾಯಿತು ಎಂದು ತಿಳಿಸಿದರು. ಒಂದು ದಿನದ ಕ್ರೀಡಾ ಅಧಿಕಾರಿಯ ನಾನು ಓದುತ್ತಿರುವ ಕಾಲೇಜಿಗೆ ಮುಖ್ಯ ಅತಿಥಿಯಾಗಿ ನನ್ನನ್ನು ಕರೆದುಕೊಂಡು ಹೋದಾಗ ಸ್ನೇಹಿತರು ನನ್ನನು ನೋಡಿ ಬಹಳ ಆಶ್ಚರ್ಯಪಟ್ಟರು. ಒಂದು ದಿನದ ಮಟ್ಟಿಗೆ ಕ್ರೀಡಾ ಅಧಿಕಾರಿಯಾಗಿದ್ದಾರೆ ಎಂದು ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಪಂಚಾಯತ್ ಕಚೇರಿಗೆ ಹೋಗಿದ್ದ ಸಂದರ್ಭದಲ್ಲಿ ಸಿಇಒ ಮೇಡಂ ನನಗೆ ಅಭಿನಂದನೆಯನ್ನು ಸಲ್ಲಿಸಿ ವಿಧ್ಯಾಭ್ಯಾಸಕ್ಕೆ ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದರು. ಈ ವಿಷಯವನ್ನು ಕೇಳಿ ನಾನು ಉತ್ತಮ ಸಾಧನೆ ಮಾಡಬೇಕು ಎಂಬ ಉತ್ಸಾಹ ಮೂಡಿತು.

ನಂತರದಲ್ಲಿ ಅಪರ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರೀತಿಯಿಂದ ಸ್ವಾಗತಿಸಿ 30 ನಿಮಿಷಗಳ ಕಾಲ ಸಮಯವನ್ನು ನನಗೆ ಮೀಸಲಿಟ್ಟು ಕೆಲವು ಪ್ರಶ್ನೆಗಳನ್ನು ಕೇಳಿದರು ನಾನು ಅದಕ್ಕೆ ಉತ್ತರಿಸಿದೆ. ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದು ಹೇಳಿದರು.

ಕರಡು ಸಮಿತಿಯ ಅಧ್ಯಕ್ಷರಾದ ಡಾ.ಬಿ.ಆರ್ ಅಂಬೇಡ್ಕರ್ ರವರು ರಚಿಸಿರುವಂತಹ ಭಾರತ ಸಂವಿಧಾನ ಪುಸ್ತಕವನ್ನು ಉಡುಗೊರೆಯಾಗಿ ನೀಡಿ ನನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಹಕಾರ ನೀಡುತ್ತೇನೆ ಎಂದು ಆಶ್ವಾಸನೆಯನ್ನು ನೀಡಿದರು ಎಂದರು


Spread the love