ಒಡೆದು ಹೋಗಿದ್ದ ಪೈಪ್ ಸರಿಪಡಿಸಿದ ಗ್ರಾಪಂ ಉಪಾಧ್ಯಕ್ಷ

Spread the love

ಒಡೆದು ಹೋಗಿದ್ದ ಪೈಪ್ ಸರಿಪಡಿಸಿದ ಗ್ರಾಪಂ ಉಪಾಧ್ಯಕ್ಷ

ಕೆ.ಆರ್.ನಗರ: ಸಾಲಿಗ್ರಾಮ ತಾಲೂಕಿನ ಮಾಯಿಗೌಡನಹಳ್ಳಿ ಗ್ರಾಮಕ್ಕೆ ನೀರು ಬಾರದ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಸ್ವತಃ ಗ್ರಾಪಂ ಉಪಾಧ್ಯಕ್ಷರೇ ಪರಿಶೀಲಿಸಿ ಒಡೆದು ಹೋಗಿದ್ದ ಪೈಪ್ ಸರಿಪಡಿಸಿ ನೀರು ಸರಬರಾಜು ಆಗುವಂತೆ ಮಾಡಿ ಗ್ರಾಮಸ್ಥರ ಮೆಚ್ಚುಗೆ ಪಾತ್ರರಾಗಿದ್ದಾರೆ.

ಮಾಯಿಗೌಡನಹಳ್ಳಿ ಪಂಚಾಯ್ತಿ ಉಪಾಧ್ಯಕ್ಷ ಎಂ.ಎನ್.ಮಹದೇವ್ ಅವರೇ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದವರು. ಸಾಲಿಗ್ರಾಮ ತಾಲೂಕಿನ ಮಾಯಿಗೌಡನಹಳ್ಳಿ ಗ್ರಾಮದ ಮುಖ್ಯರಸ್ತೆಯ ಬಳಿ ನೀರು ಸರಬರಾಜು ಮಾಡುವ ಪೈಪ್ ಒಡೆದಿದ್ದರಿಂದ ಗ್ರಾಮಕ್ಕೆ ನೀರು ಸರಬರಾಜಾಗುತ್ತಿರಲಿಲ್ಲ. ಈ ಬಗ್ಗೆ ಗ್ರಾಮಸ್ಥರು ಪಂಚಾಯಿತಿಗೆ ದೂರು ನೀಡಿದ್ದರು.

ಆದರೆ ಪಂಚಾಯ್ತಿಯಲ್ಲಿ ಪರಿಣತಿ ಪಡೆದ ವಾಟರ್‌ ಮ್ಯಾನ್ ಇಲ್ಲದ್ದರಿಂದ ಮಾಯಿಗೌಡನಹಳ್ಳಿ ಪಂಚಾಯ್ತಿ ಉಪಾಧ್ಯಕ್ಷ ಎಂ.ಎನ್.ಮಹದೇವ್ ಅವರೇ ಪೈಪ್ ದುರಸ್ತಿ ಮಾಡಿ ಕುಡಿಯುವ ನೀರು ಸರಬರಾಜಾಗುವಂತೆ ಮಾಡಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.


Spread the love