ಒಡೆಯರ್ ಎಕ್ಸ್ ಪ್ರೆಸ್ ರೈಲು ಪ್ರಯಾಣಿಕರಿಗೆ ಸಿಹಿಹಂಚಿ ಸಂಭ್ರಮಾಚರಣೆ

Spread the love

ಒಡೆಯರ್ ಎಕ್ಸ್ ಪ್ರೆಸ್ ರೈಲು ಪ್ರಯಾಣಿಕರಿಗೆ ಸಿಹಿಹಂಚಿ ಸಂಭ್ರಮಾಚರಣೆ

ಮೈಸೂರು: ಭಾರತೀಯ ರೈಲ್ವೆ ಇಲಾಖೆ ವತಿಯಿಂದ ಸಂಸದ ಪ್ರತಾಪ್ ಸಿಂಹ ರವರ ಶ್ರಮದ ಫಲವಾಗಿ ಮೈಸೂರು ಜಂಕ್ಷನ್ ನಿಂದ ಬೆಂಗಳೂರಿಗೆ ಚಲಿಸುವ ರೈಲು ಗಾಡಿಗೆ ಒಡೆಯರ್ ಎಕ್ಸ್ ಪ್ರೆಸ್ ಎಂದು ನಾಮಕರಣ ಮಾಡಿರುವುದನ್ನ ಸ್ವಾಗತಿಸಿ ಮೈಸೂರು ಒಡೆಯರ್ ಅಭಿಮಾನಿಗಳ ವೇದಿಕೆ ವತಿಯಿಂದ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಒಡೆಯರ್ ಎಕ್ಸ್ ಪ್ರೆಸ್ ರೈಲ್ವೆ ಪ್ರಯಾಣಿಕರಿಗೆ ಮೈಸೂರು ಪಾಕ್ ಸಿಹಿ ವಿತರಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಗೆ ಜೈಕಾರ ಕೂಗಿ ಸಂಭ್ರಮಿಸಲಾಯಿತು.

ಇದೇ ಸಂದರ್ಭದಲ್ಲಿ ಮೈಸೂರು ಒಡೆಯರ್ ಅಭಿಮಾನಿಗಳ ವೇದಿಕೆ ಸಂಚಾಲಕ ಗಿರೀಶ್ ರವರು ಮಾತನಾಡಿ ಮೈಸೂರು ಸಂಸ್ಥಾನದ ಅಭಿವೃದ್ಧಿಯ ಹರಿಕಾರರು ಒಡೆಯರ್ ರಾಜ ಕುಟುಂಬದ ಆಡಳಿತ ಕೊಡುಗೆ ಸೇವೆಯನ್ನು ಸ್ಮರಿಸಲು ರೈಲ್ವೆ ಇಲಾಖೆ ಒಡೆಯರ್ ಎಕ್ಸ್ ಪ್ರೆಸ್ ಎಂದು ನಾಮಕರಣ ಮಾಡಿರುವುದು ಸ್ವಾಗತಾರ್ಹ. ಸಾಂಸ್ಕೃತಿಕ ರಾಜಧಾನಿ ಮೈಸೂರು ವಿಶ್ವದೆಲ್ಲಡೆ ಗುರುತಿಸಿಕೊಳ್ಳಲು ನಾಲ್ವಡಿ ಕೃಷ್ಣರಾಜ ಒಡಯರ್ ರವರು ಪಟ್ಟಂತಹ ಶ್ರಮ, ಮೈಸೂರು ರಾಜ್ಯ ಸ್ಥಾಪಿಸಲು ತಂದತಹ ಅಭಿವೃದ್ಧಿ ಯೋಜನೆಗಳು ಅಪಾರವಾದುದು, ಪ್ರತಾಪ್ ಸಿಂಹ ರವರು ಲೇಖಕರಾಗಿದ್ದ ಸಂದರ್ಭದಿಂದಲೂ ಕೂಡ ಮೈಸೂರು ರಾಜ್ಯದ ಇತಿಹಾಸದ ಬಗ್ಗೆ ಯುವಪೀಳಿಗೆಯಲ್ಲಿ ಅರಿವು ಮೂಡುಸುವ ಕೆಲಸ ಮಾಡುತ್ತಿದ್ದರು ಇಂದು ಸಂಸದರಾಗಿ ಒಡೆಯರ್ ಎಕ್ಸ್ ಪ್ರೆಸ್ ನಾಮಕರಣ ಮಾಡಲು ಆಡಳಿತಾತ್ಮಕವಾಗಿ ಕಾರ್ಯಗತಕ್ಕೆ ತಂದ ಸಂಸದರಿಗೆ ಅಭಿನಂದನೆಗಳು ಎಂದರು,

ಯುವ ಮುಖಂಡ ಅಜಯ್ ಶಾಸ್ತ್ರಿ ಮಾತನಾಡಿ ಮೈಸೂರಿನಿಂದ ಹೊರಡುವ ರೈಲು ಗಾಡಿಗೆ ಸಂಸದ ಪ್ರತಾಪ್ ಸಿಂಹ ರವರು ಒಡೆಯರ್ ಎಕ್ಸ್‌ ಪ್ರೆಸ್‌ ಎಂದು ನಾಮಕರಣ ಮಾಡಲು ಕೇಂದ್ರ ಸರ್ಕಾರದಿಂದ ಆದೇಶ ತಂದಿದ್ದು ಮೈಸೂರಿಗರಿಗೆ ನಮ್ಮ ಪರಂಪರೆ ಸಂಸ್ಕೃತಿಯ ಮೇಲೆ ಘನತೆಯ ಗೌರವ ಹೆಚ್ಚಿಸಿದೆ. ಮೈಸೂರು ಬೆಂಗಳೂರು ನಡುವೆ ಚಲಿಸುವ ಒಡೆಯರ್ ಎಕ್ಸ್ ಪ್ರೆಸ್ ರೈಲು ಗಾಡಿಯನ್ನ ಚಾಮರಾಜನಗರದ ವರೆಗೆ ಸಂಚರಿಸಲು ವಿಸ್ತರಿಸಲು ರೈಲ್ವೆ ಇಲಾಖೆ ಮುಂದಾದರೆ ಸಾಕಷ್ಟು ಮಂದಿ ಗಡಿನಾಡು ಪ್ರದೇಶದ ನಾಗರೀಕರಿಗೆ ದಿನನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಮಹಿಳೆಯರಿಗೆ ಕಾರ್ಮಿಕರಿಗೆ ಪ್ರಯಾಣಿಕರಿಗೆ ಅನೂಕೂಲವಾಗಲಿದೆ ಎಂದರು

ಇದೇ ಸಂಧರ್ಭದಲ್ಲಿ ಮೈಸೂರು ನಾಗರಿಕರ ವೇದಿಕೆಯ ಕಾರ್ಯದರ್ಶಿ ಸಂದೇಶ್ ಪವಾರ್, ಸಂಚಾಲಕ ಗಿರೀಶ್, ರಾ. ಪರಮೇಶ್ ಗೌಡ, ಯುವ ಮುಖಂಡ ಅಜಯ್ ಶಾಸ್ತ್ರಿ, ಮಹೇಶ್ ರಾಜೇ ಅರಸ್, ಜಯಸಿಂಹ, ಶರವಣ, ಉಮೇಶ್, ಪ್ರಶಾಂತ್, ಹರೀಶ್, ಸುಚೀಂದ್ರ, ಮುರಳಿ, ಇನ್ನಿತರರು ಇದ್ದರು


Spread the love