ಒಲಂಪಿಕ್ಸ್ Selfie Point ಅಳವಡಿಕೆಗೆ ಮನವಿ

Spread the love

ಒಲಂಪಿಕ್ಸ್ Selfie Point ಅಳವಡಿಕೆಗೆ ಮನವಿ

ಬೆಂಗಳೂರು: ಜಪಾನ್ ದೇಶದಲ್ಲಿ ಟೋಕಿಯೋ ಒಲಂಪಿಕ್ಸ್ 2020 ಕ್ರೀಡಾಕೂಟವು 2021ರ ಜುಲೈ 23 ರಿಂದ ಆಗಸ್ಟ್ 08 ರವರೆಗೆ ನಡೆಯಲಿದೆ.

ಈ ಕ್ರೀಡಾಕೂಟದಲ್ಲಿ ಭಾರತ ದೇಶದಿಂದ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಮತ್ತು ಭಾರತದ 130 ಕೋಟಿ ನಾಗರಿಕರು ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು ಭಾರತ ಸರ್ಕಾರವು ಎಲ್ಲೆಡೆ Selfie Point ಗಳನ್ನು ಅಳವಡಿಸಲು ಸೂಚಿಸಲಾಗಿದೆ.

ಈ ಸಂಬಂಧ ಕ್ರೀಡಾಭಿಮಾನಿಗಳು ಎಲ್ಲರೂ Selfie Point ಗಳಲ್ಲಿ ಛಾಯಾಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪ್ರಚುರ ಪಡಿಸುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಕೋರಲಾಗಿದೆ.


Spread the love